Saturday, April 20, 2024
spot_imgspot_img
spot_imgspot_img

ಪೆರಾಜೆ ಶ್ರೀದೇವಿ ಭಜನಾ ಮಂದಿರದಲ್ಲಿ ನಡೆದ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

- Advertisement -G L Acharya panikkar
- Advertisement -

ಬಂಟ್ವಾಳ(ನ.8): ಪೆರಾಜೆ ಶ್ರೀದೇವಿ ಭಜನಾ ಮಂದಿರದಲ್ಲಿ ಅಕ್ಟೋಬರ 31 ರಿಂದ ನವೆಂಬರ್ 7ರ ವರಗೆ ಭಜನಾ ತರಬೇತಿ ಶಿಬಿರವು ನಡೆಯಿತು.ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಣಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಮೋಕ್ತೇಶರ ಸಚಿನ್ ರೈ ಮಾಣಿ ಗುತ್ತು ರವರು ಭಜನೆಯಂತಹ ಉತ್ತಮ ಸಂಸ್ಕಾರ ಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದ ಅನಿವಾರ್ಯತೆ ಇದೆ.ಭಜನೆಯ ಹಾಡುಗಳು ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಮಕ್ಕಳು ಭಜನೆಯಂತಹ ಶಿಬಿರದ ಲ್ಲಿ ಭಾಗವಹಿಸಿದಾಗ ಬೌದ್ಧಿಕ ಶಕ್ತಿಯನ್ನು ವೃದ್ಧಿಸಲು ಸಹಾಯವಾಗುತ್ತದೆ. ಭಜನೆಯಿಂದ ವಿಭಜನೆಯಿಲ್ಲ ಎಂಬುದು ನಮ್ಮ ಹಿರಿಯರು ನಮಗೆ ಹೇಳಿದ್ದಾರೆ ಎಂದರು.

ಭಜನಾ ಶಿಕ್ಷಕ ಅಶ್ವತ್ ಬರಿಮಾರು ಮಾತನಾಡಿ ಪ್ರತಿಯೊಂದು ಮನೆಯಲ್ಲಿ ಭಜನೆ ನಡೆಯಬೇಕು.ದೇವರಿಗೆ ಭಜನೆಯ ಮೂಲಕ ಪೂಜೆ ಸಲ್ಲಿಸಿದಾಗ ಮನೆಯಲ್ಲಿ ಸಮೃದ್ದಿ ನೆಮ್ಮದಿ ಉಂಟಾಗುತ್ತದೆ.ಮನಸ್ಸಿನ ಒಳಗೆ ದೇವರಿದ್ದಾರೆ ಎಂಬ ಸತ್ಯವನ್ನು ಅರಿಯಲು ಭಜನೆ ಅಗತ್ಯ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಕ್ಕಳಿಗೆ ಭಜನಾ ತರಬೇತಿಯನ್ನು ನೀಡಿದ ಗಂಗಾಧರ ಗೌಡ ಮಾಣಿ, ಅಶ್ವತ್ ಬರಿಮಾರು, ಪ್ರಶಾಂತ್ ಶಂಭೂರು, ಸಂದೀಪ್ ದರ್ಬಳಿಕೆ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಬುಡೋಳಿ ಗುತ್ತು, ಶ್ರೀದೇವಿ ಸೇವಾ ಟ್ರಸ್ಟ್ ಅಧಕ್ಷ ಮಾಧವ ಪಾಳ್ಯ, ಪ್ರಮುಖರಾದ ಬಾಲಕೃಷ್ಣ ಮಿತ್ತಪೆರಾಜೆ, ನಾಗೇಶ್ ಕೊಂಕಣಪದವು ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಅಧ್ಯಕ್ಷ ಯತಿರಾಜ್ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು ಹಾಗೂ ವಂದಿಸಿದರು.

- Advertisement -

Related news

error: Content is protected !!