Saturday, June 28, 2025
spot_imgspot_img
spot_imgspot_img

ಪೆರ್ಡೂರು: ಗೆಳೆಯರ ಬಳಗ ಪೆರ್ಡೂರು, ಬೈದಶ್ರೀ ಫ್ರೆಂಡ್ಸ್ ಅಲಂಗಾರು ವತಿಯಿಂದ ಅಲಂಗಾರು ಶಾಲೆಗೆ ಉಚಿತ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ ಹಾಗೂ ಡೆಸ್ಕ್ ಬೆಂಚುಗಳ ಕೊಡುಗೆ

- Advertisement -
- Advertisement -

ಪೆರ್ಡೂರಿನ ಹೆಮ್ಮೆಯ ಸಂಸ್ಥೆಗಳಾದ ಗೆಳೆಯರ ಬಳಗ ಪೆರ್ಡೂರು ಹಾಗೂ ಬೈದಶ್ರೀ ಫ್ರೆಂಡ್ಸ್ ಅಲಂಗಾರು ಇವರ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಲಂಗಾರು ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಸತತ 11ನೇ ವರ್ಷ ಉಚಿತ ನೋಟ್ ಬುಕ್, ಲೇಖನ ಸಾಮಗ್ರಿ, ಹಾಗೂ ಸುಮಾರು 40-45 ಸಾವಿರ ರೂಪಾಯಿ ವೆಚ್ಚದಲ್ಲಿ ಡೆಸ್ಕ್ ಬೆಂಚು ಗಳ ಕೊಡುಗೆ ನೀಡುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ದಿವ್ಯ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಪೆರ್ಡೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ದೇವು ಪೂಜಾರಿ, ಗೆಳೆಯರ ಬಳಗದ ಅಧ್ಯಕ್ಷರ ಕೃಷ್ಣ ಪೂಜಾರಿ, ಗೌರವಾಧ್ಯಕ್ಷ ಸತೀಶ್ ಅಣ್ಣು ಗರಡಿ, ಅರ್ಚಕ ರಾಜು ಪೂಜಾರಿ, ಸಂಸ್ಥೆಯ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಜನಾರ್ಧನ್, ಮಹೇಶ್, ಸೂರಜ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಕುಸುಮ ಕಾರ್ಯಕ್ರಮವನ್ನ ನಿರೂಪಿಸಿದರು.

- Advertisement -

Related news

error: Content is protected !!