Saturday, June 28, 2025
spot_imgspot_img
spot_imgspot_img

ಮಣಿಪಾಲ: ವ್ಯಕ್ತಿ ನಾಪತ್ತೆ – ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಮಣಿಪಾಲ: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿಕುಮಾರ್‌ (32) ಈತನು ಮಣಿಪಾಲದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದು ಆತನು ವಿಪರೀತ ಶರಾಬು ಕುಡಿಯುವ ಚಟವನ್ನು ಕೂಡಾ ಹೊಂದಿದ್ದು, ಅಂಗಡಿಯಲ್ಲಿ ಸರಿಯಾಗಿ ಕೆಲಸ ಮಾಡದೇ ಇದ್ದು ದಿನಾಂಕ: 07/08/2024 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಅಂಗಡಿಯಿಂದ ಹೋದಾತ ಅಂಗಡಿಗೂ ಬಾರದೇ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ.

ಹೆಸರು: ರವಿಕುಮಾರ್‌ ವಯಸ್ಸು: 32 ವರ್ಷ, ಬಣ್ಣ : ಕಪ್ಪು ಮೈಬಣ್ಣ , ಎತ್ತರ: 5 ಅಡಿ 5 ಇಂಚು, ಭಾಷೆ: ಕನ್ನಡ, ಹಿಂದಿ, ತಮಿಳು ಹಿಂದಿ ಮಾತಾನಾಡುತ್ತಾನೆ.ಬಟ್ಟೆ: ಬಿಳಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್‌ಧರಿಸಿರುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 195/2024 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!