



ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ, ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ದಿ| ಜ್ಞಾನಪ್ರಕಾಶ್ ಆಚಾರ್ಯ ಅಶ್ವಥನಗರ ಪೆರುವಾಯಿ ಇವರ ಸ್ಮರಣಾರ್ಥ ರಕ್ತದಾನ ಶಿಬಿರ ಕಾರ್ಯಕ್ರಮ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾವೇದಿಕೆಯಲ್ಲಿ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಕಾಳಿಕಾಂಬಾ ಆಂಜನೇಯ ಕ್ಷೇತ್ರ ಕುಕ್ಕಾಜೆ, ಹಿಂದೂ ಮುಖಂಡರು ಹಾಗೂ ರಾಜಕೀಯ ಮುಂದಾಳು ಅರುಣ್ ಕುಮಾರ್ ಪುತ್ತಿಲ, ಭಾಜಪ ಪುಣಚ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಯಾನಂದ್ ಶೆಟ್ಟಿ ಉಜಿರೆಮಾರು, ಪದ್ಮನಾಭ ಕಟ್ಟೆ, ಜಿಲ್ಲಾ ಮಂದಿರ ಅರ್ಚಕ ಪ್ರಮುಖ ವಿಶ್ವ ಹಿಂದೂ ಪರಿಷತ್ ಪುತ್ತೂರು, ಶಾಲಾ ಮುಖ್ಯೋಪಾದ್ಯಯರು ಕುಂಜ್ಞ ನಾಯ್ಕ, ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷರು ಹಾಗೂ ಹಾಲಿ ಪಂಚಾಯತ್ ಸದಸ್ಯರು ಬಾಲಕೃಷ್ಣ ಪೂಜಾರಿ ಕಲ್ಲಡ್ಕ ಪೆರುವಾಯಿ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪೆರುವಾಯಿ ಘಟಕದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಶೇಖರ ಪೂಜಾರಿ ಕುಂಬಳಕೋಡಿ ಹಾಗೂ ಬಜರಂಗದಳ ಸಂಚಾಲಕರಾದ ಶ್ರೀ ವಿನೀತ್ ಶೆಟ್ಟಿ ಕಾನ ಪೆರುವಾಯಿ ಉಪಸ್ಥಿತರಿದ್ದರು.ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರು ಮಂಜುನಾಥ ಆಚಾರ್ಯ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸ್ವರ್ಗಸ್ಥರಾದ ಜ್ಞಾನಪ್ರಕಾಶ್ ಆಚಾರ್ಯ ಇವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಲಾಯಿತು.
ಶ್ರೀಮತಿ ಅಶ್ವಿನಿ ಜಯಪ್ರಕಾಶ್ ಪಾಟಳಿ ಕೊಲ್ಲತ್ತಡ್ಕ ಪ್ರಾರ್ಥಿಸಿ, ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಪೆರುವಾಯಿ ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಶೇಖರ ಪೂಜಾರಿ ಕುಂಬಳಕೋಡಿ ವಂದಿಸಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೆರುವಾಯಿ ಮಂಡಲ ಕಾರ್ಯವಾಹ ವಿಕಾಸ್ ರಾಜ್ ಓಣಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.








