Thursday, April 25, 2024
spot_imgspot_img
spot_imgspot_img

ವಿಟ್ಲ: ರಾತ್ರಿ ಹಗಲೆನ್ನದೆ ದುಡಿದು ಮನೆ ನಿರ್ಮಿಸಿಕೊಟ್ಟ ವಿ.ಹಿಂ.ಪ ಬಜರಂಗದಳದ ಕಾರ್ಯಕರ್ತರು

- Advertisement -G L Acharya panikkar
- Advertisement -

ಸಂಘಟನೆಯೇ ಶಕ್ತಿ… ಸಂಘಟನೆಯಿಂದ ಸೇವೆ ಎಂಬ ಧ್ಯೇಯವನ್ನು ಉಸಿರಾಗಿಸಿ ಜನರ ಸೇವೆಗೆಂದೇ ಹಲವಾರು ಸಂಘಟನೆಗಳು ಇಂದು ಬಡ ಜನರ ಸೇವೆಗೆ ನಿಂತಿದೆ. ಅದೆಷ್ಟೋ ಮಂದಿಯ ಬಾಳಿಗೆ ಆಸರೆಯಾದ ಸಂಘಟನೆಗಳು ನೂರಾರು. ಅಂತಹದ್ದೇ ಒಂದು ಪ್ರಮುಖ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಘಟಕ. ಈ ಸಂಘಟನೆಯ ಹತ್ತಾರು ಯುವಕರು ಸೇರಿಕೊಂಡು ಪೆರುವಾಯಿಯ ನಾರಾಯಣ ಆಚಾರ್ಯ ಎಂಬವರ ಕುಟುಂಬಕ್ಕೆ ಆಶ್ರಯ ನೀಡಿದೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ಪೆರುವಾಯಿ ಗ್ರಾಮದ ಅಶ್ವಥನಗರ ನಿವಾಸಿ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ಸಹೃದಯಿ ಹಿಂದೂ ಬಾಂಧವರ ಸಹಕಾರದಿಂದ ನಿರ್ಮಿಸಲ್ಪಟ್ಟ ನೂತನ ಮನೆಯ ಹಸ್ತಾಂತರದ ಸರಳ ಕಾರ್ಯಕ್ರಮವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಇಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿಗಳ ಶುಭಾಶೀರ್ವಾದದಿಂದ ನಡೆಯಿತು.

ನಾರಾಯಣ ಆಚಾರ್ಯ ಅವರ ಮನೆ ಸಂಪೂರ್ಣ ಹಾನಿಯಾಗಿತ್ತು. ಇವರ ಸಂಕಷ್ಟವನ್ನು ಪೆರುವಾಯಿಯ ಸಂಘಟನೆಯ ಪ್ರಮುಖರ ಬಳಿ ಹೇಳಿಕೊಂಡಿದ್ದರು. ಈ ಮಾತನ್ನು ಸಂಘಟನೆಯ ಯುವಕರಲ್ಲಿ ತಿಳಿಸಿದ್ದು ಯುವಕರೆಲ್ಲಾ ಜೊತೆಗೂಡಿ ನಾರಾಯಣ ಆಚಾರ್ಯ ಅವರಿಗೆ ಚೊಕ್ಕದಾದ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಸಂಘಟನೆ, ಊರ ಪರವೂರ ಮಂದಿಯ ಸಹಾಯಾರ್ಥದಿಂದ 10 – 12 ದಿನಗಳ ನಿರಂತರ ಶ್ರಮದಿಂದ ಮನೆಯನ್ನು ನಿರ್ಮಿಸಲಾಗಿದೆ.

ಬಜರಂಗದಳ ರಾಜ್ಯ ಸಹ ಸoಯೋಜಕ ಹಾಗೂ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತ್ತಡ್ಕ, ಜಿಲ್ಲಾ ಸಂಚಾಲಕ ಶ್ರೀಧರ ತೆಂಕಿಲ, ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್, ಸಂಘದ ತಾಲೂಕು ಸಂಪರ್ಕ ಪ್ರಮುಖ್ ವಿನೋದ್ ಶೆಟ್ಟಿ ಅಡ್ಕಸ್ಥಳ, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ ವಿಟ್ಲ ,ಬಜರಂಗದಳ ಸಹ ಸಂಚಾಲಕ ಚಂದ್ರಹಾಸ್ ಕನ್ಯಾನ, ಭಾಜಪ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಬಜರಂಗದಳ ವಿಟ್ಲ ಪ್ರಖಂಡದ ಯತೀಶ್ ಪೆರುವಾಯಿ, ಸಂಘದ ಮಂಡಲ ಕಾರ್ಯವಾಹ ಜ್ಞಾನಪ್ರಕಾಶ್ ಆಚಾರ್ಯ, ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ, ಅಧ್ಯಕ್ಷ ಶೇಖರ ಪೂಜಾರಿ, ಬಜರಂಗದಳ ಸಂಚಾಲಕ ಮೋಕ್ಷಿತ್ ಪೆರುವಾಯಿ, ಪ್ರಮುಖ ನಾಗೇಶ್ ಮಾಸ್ತರ್ ಪೆರುವಾಯಿ, ಆನಂದ್ ಶೆಟ್ಟಿ ಮುಳಿಯ, ಪ್ರಕಾಶ್ಚಂದ್ರ ಶೆಟ್ಟಿ ದರ್ಕಾಸು , ಪ್ರಭಾಕರ ಶೆಟ್ಟಿ ಕಲೈತ್ತಿಮಾರು , ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಗೋಪಾಲ ಮಡಿವಾಳ ಬೆರಿಪದವು, ಮನೋಹರ್ ಶೆಟ್ಟಿ ಪೇರಡ್ಕ , ಮನೋರಾಜ್ ರೈ ಅಡ್ವಾಯಿ, ಶಿವರಾಮ ಮಣಿಯಾಣಿ ತಚ್ಚಮ್ಮೆ , ಯೋಗೀಶ್ ಆಳ್ವ ಕಲೈತ್ತಿಮಾರು, ಹಾಗೂ ಊರ ಪರವೂರ ಹಿಂದೂ ಬಾಂಧವರು ಉಪಸ್ಥಿತರಿದ್ದರು.

- Advertisement -

Related news

error: Content is protected !!