Tuesday, June 25, 2024
spot_imgspot_img
spot_imgspot_img

ವಿಶ್ವಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ 8 ನೇ ವರುಷದ ಗೋಪೂಜಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಶ್ವಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಇದರ ವತಿಯಿಂದ 8 ನೇ ವರುಷದ ಗೋಪೂಜಾ ಕಾರ್ಯಕ್ರಮವು ನ.19 ರಂದು ಪೆರುವಾಯಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಬಹಳ ಅದ್ದೂರಿಯಿಂದ ಜರುಗಿತು . ಭಜನಾ ಕಾರ್ಯಕ್ರಮದಿಂದ ಉಧ್ಘಾಟನೆಗೊಂಡು ಬಳಿಕ ಶ್ರೀ ಗೋಪಾಲಕೃಷ್ಣ ದೇವರಿಗೆ ಕಾರ್ತಿಕ ಪೂಜೆಯನ್ನು ನೆರವೇರಿಸಲಾಯಿತು .

ಕಾರ್ಯಕ್ರಮದಲ್ಲಿ ನೆರೆದಿದ್ದ ಮಾತೆಯರು ಗೋಮಾತೆಗೆ ಪೂಜೆ ಸಲ್ಲಿಸಿ ಎಲ್ಲರೂ ಗೋಮಾತೆಯ ಆಶೀರ್ವಾದವನ್ನು ಪಡೆದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀಯುತ ನವೀನ್ ನೆರಿಯ ಇವರು ದೇಸಿ ತಳಿಯ ಗೋವಿನ ಮಹತ್ವವನ್ನು ಮತ್ತು ಹಿಂದೂ ಧರ್ಮದ ಸಂಸ್ಕೃತಿ ಆಚಾರ ವಿಚಾರಗಳ‌ ರಕ್ಷಣೆಯ ಕುರಿತು ಬಹಳ ಸುಂದರವಾಗಿ ತಿಳಿಸಿಕೊಟ್ಟರು.

ಬಜರಂಗದಳ ವಿಟ್ಲ ಪ್ರಖಂಡದ ಸಂಚಾಲಕ ಚೇತನ್ ಕಡಂಬು ಹಿತನುಡಿಗಳನ್ನಾಡಿದರು. ವಿಶ್ವಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ ,ವಿಶ್ವಹಿಂದೂ ಪರಿಷತ್ ಪೆರುವಾಯಿ ಘಟಕದ ಅಧ್ಯಕ್ಷ ಶೇಖರ ಪೂಜಾರಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ,ಬಜರಂಗದಳ ಪೆರುವಾಯಿ ಘಟಕದ ಸಂಚಾಲಕ ವಿನೀತ್ ಶೆಟ್ಟಿ ಕಾನ ಪೆರುವಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೆರುವಾಯಿ ಗ್ರಾಮದ ಅಂಗನವಾಡಿಯಲ್ಲಿ ಅನೇಕ ವರುಷಗಳಿಂದ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾದ ಸಮಾಜ ಮಂದಿರ ಅಂಗನವಾಡಿ ಸಹಾಯಕಿ ಕಡೆಂಬಿಲ ನಿವಾಸಿ ಇಂದಿರಾ ನಾಯ್ಕ, ಕಡೆಂಬಿಲ ಅಂಗನವಾಡಿ ಕೇಂದ್ರದ ಸಹಾಯಕಿ ಬೆರಿಪದವು ನಿವಾಸಿ ಪುಷ್ಪಾವತಿ, ಕಡೆಂಗೋಡ್ಲು ಅಂಗನವಾಡಿ ಸಹಾಯಕಿ ಕಡೆಂಗೋಡ್ಲು ನಿವಾಸಿ ನಳಿನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ಅಶ್ವಥನಗರ ಕೆ ಉದಯಕುಮಾರ್ ಭಟ್ ಹಾಗೂ ರಶ್ಮಿ .ಜಿ ದಂಪತಿಗಳ ಪುತ್ರ ಕು||ಶ್ರೇಯಸ್ ಭಟ್ ಯು ಇವರನ್ನು ಸನ್ಮಾನಿಸಲಾಯಿತು.

ಕುಮಾರಿ ವರ್ಷಿತಾ ಸ್ವಾಗತಿಸಿ, ವಿಶ್ವಹಿಂದೂ ಪರಿಷತ್ ಪೆರುವಾಯಿ ಘಟಕದ ಕಾರ್ಯದರ್ಶಿ ಮೋಕ್ಷಿತ್ ಪೆರುವಾಯಿ ಸ್ವಾಗತಿಸಿದರು. ಸಂಘಟನೆಯ ಪ್ರಮುಖ್‌ ಯತೀಶ್ ಪೆರುವಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರೂಪಕಿ ಕುಮಾರಿ ಅಶ್ವಿನಿ ಪೆರುವಾಯಿ ವೈಯಕ್ತಿಕ ಗೀತೆಯನ್ನು ಹಾಡಿದರು. ವಿಕಾಸ್ ರಾಜ್ ಪೆರುವಾಯಿ ಧನ್ಯವಾದವಿತ್ತರು. ಧಾರ್ಮಿಕ ಮುಂದಾಳು ನಾಗೇಶ್ ಮಾಸ್ಟರ್ ಕೊಳ್ಳತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಹನುಮಾನ್ ನಾಸಿಕ್ ಪೆರುವಾಯಿ ಇವರ ನಾಸಿಕ್ ಬ್ಯಾಂಡ್ ಪ್ರದರ್ಶನ ಮತ್ತು ಸಿಡಿಮದ್ದು ಪ್ರದರ್ಶನಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು . ಕಾರ್ಯಕ್ರಮದಲ್ಲಿ ನೂರಾರು ಹಿಂದೂ ಬಾಂಧವರು ಭಾಗವಹಿಸಿದ್ದರು.

- Advertisement -

Related news

error: Content is protected !!