Tuesday, April 30, 2024
spot_imgspot_img
spot_imgspot_img

ಪೆರುವಾಯಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಘಟಕಕ್ಕೆ ಅಳವಡಿಸಿದ ಹಳೆ ಶಟರ್‌ ಕಾಣೆ..!

- Advertisement -G L Acharya panikkar
- Advertisement -

ಕಾಣೆಯಾದ ಶಟರ್‌ ಹಿಂದೆ ಗ್ರಾ.ಪಂ ಅಧ್ಯಕ್ಷರ ಕೈವಾಡ..?! ; ಸ್ಥಳೀಯರಿಂದ ದೂರು

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕಡೆಂಬಿಲ ಎಂಬಲ್ಲಿ ಗ್ರಾಮ ಪಂಚಾಯತ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಘನ ತ್ಯಾಜ್ಯ ಘಟಕದ ಹಳೆ ಶಟರ್‌ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಈ ಘನತ್ಯಾಜ್ಯ ಘಟಕದ ಮುಖ್ಯ ದ್ವಾರಕ್ಕೆ ಅಳವಡಿಸಿದ ಶಟರ್‌ ಉಪಯೋಗವಾಗುವ ರೀತಿಯಲ್ಲಿದ್ದರೂ, ಅದನ್ನು ತೆಗೆದು ಇದೀಗ ಹೊಸ ಶಟರ್‌ ಅಳವಡಿಕೆ ಮಾಡಿರುವುದು ಕಂಡುಬಂದಿದೆ. ಹೊಸ ಶಟರ್‌ ಅಳವಡಿಸಿ ಗ್ರಾಮ ಪಂಚಾಯತ್‌ ಹಣ ದುರ್ಬಳಕೆ ಮಾಡುತ್ತಿದೆ, ಎರಡು ವರ್ಷ ಉಪಯೋಗವಾದ ಶಟರನ್ನು ಬದಲಿಸುವ ಅಗತ್ಯ ಏನಿತ್ತು? ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಅದಲ್ಲದೆ ಹಳೆಯ ಶಟರ್‌ನ್ನು ಸ್ಕ್ರಾಪ್‌ಗೆ ಹಾಕುವುದರಿಂದ ಅದರಿಂದ ಬಂದ ಹಣವನ್ನು ಪಂಚಾಯತ್‌ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವುದು ವಾಡಿಕೆ. ಆದರೆ ಗ್ರಾಮ ಪಂಚಾಯತ್‌ ನಿಧಿಗೆ ಆ ಹಣ ಬಂದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ವಿಚಾರಿಸಿದರೂ ಯಾವುದೇ ಸ್ಪಷ್ಟನೆ ಬಂದಿಲ್ಲ. ಹಿಂದೆ ಇದ್ದ ಶೆಟರ್‌ ಕಾಣೆಯಾಗಿರುವ ನೇರ ಆರೋಪವು ಪೆರುವಾಯಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನೆಫೀಸಾ ಕಡೆಂಬಿಲ ಇವರ ಮೇಲೆ ಇದ್ದು, ಈ ಬಗ್ಗೆ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ನೀಡಿರುವ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ.

ತಮ್ಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಳೆ ಶಟರ್‌ ಕಾಣೆಯಾಗಿರುವ ಬಗ್ಗೆ ಪೊಲೀಸ್‌ ಇಲಾಖೆಗೆ ದೂರು ನೀಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯವರಿಗೆ ಸ್ಥಳೀಯರೊಬ್ಬರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!