Saturday, June 27, 2026
spot_imgspot_img
spot_imgspot_img

ಚಾರ್ಮಾಡಿ ಘಾಟ್‌ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ : ತಪ್ಪಿದ ಭಾರೀ ದುರಂತ

- Advertisement -
- Advertisement -

ಚಾರ್ಮಾಡಿ : ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯ ಅಲೇಖಾನ್ ಎಂಬಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಪೆಟ್ರೋಲ್ ತುಂಬಿಸಿಕೊ0ಡಿದ್ದ ಟ್ಯಾಂಕರ್ ಮಾಗುಂಡಿಗೆ ತೆರಳುತ್ತಿತ್ತು. ಟ್ಯಾಂಕರ್ ಚಾರ್ಮಾಡಿ ಘಾಟಿಯ ಅಲೇಖಾನ್ ಬಳಿಗೆ ಬರುತ್ತಿದ್ದಂತೆಯೇ ಪಲ್ಟಿಯಾಗಿದ್ದು, ಇದರಿಂದ ಪೆಟ್ರೋಲ್ ಸೋರಿಕೆಮಾಗಿದೆ. ಟ್ಯಾಂಕರ್‌ನಲ್ಲಿ ಸುಮಾರು 8000 ಲೀಟರ್ ಪೆಟ್ರೋಲ್ ಹಾಗೂ 4000 ಲೀಟರ್ ಡಿಸೇಲ್ ಸಂಗ್ರಹವಿತ್ತು ಎನ್ನಲಾಗಿದೆ.

ಪೆಟ್ರೋಲ್ ಟ್ಯಾಂಕರ್ ಮತ್ತೊಂದು ಬದಿಗೆ ಪಲ್ಟಿಯಾಗಿದ್ರೆ ಪ್ರಪಾತಕ್ಕೆ ಉರುಳುವ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಣಕಲ್ ಠಾಣೆಯ ಪೊಲೀಸರು ಆಗಮಿಸಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಬಣಕಲ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!