Thursday, May 2, 2024
spot_imgspot_img
spot_imgspot_img

ನಿಷೇಧಿತ ಪಿಎಫ್‌ಐ ಸಂಘಟನೆಯ ದ.ಕ ಜಿಲ್ಲಾಧ್ಯಕ್ಷ ಇಝಾಜ್ ಅಹಮದ್‌ ಪೊಲೀಸರ ವಶಕ್ಕೆ

- Advertisement -G L Acharya panikkar
- Advertisement -

ಮಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆಯ ದ.ಕ ಜಿಲ್ಲಾಧ್ಯಕ್ಷ ಇಝಾಜ್ ಅಹಮದ್ ಬಂಟ್ವಾಳ ಎಂಬಾತನನ್ನು ಕೊಯಮತ್ತೂರು ಪೊಲೀಸರು ವಶಕ್ಕೆ ಪಡೆದಿದ್ದು ಎನ್‌ಐಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ನಿಷೇಧಿತ ಪಿಎಫ್‌ಐನ ಜಿಲ್ಲಾ ಅಧ್ಯಕ್ಷ ಇಝಾಜ್‌ ಅಹಮದ್‌ ಅಕ್ಟೋಬರ್‌ 27. ರಂದು ಎನ್‌ಐಎ ಅಧಿಕಾರಿಗಳು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ವಿದೇಶಕ್ಕೆ ಹಾರಲು ಸಕಲ ಸಿದ್ದತೆ ನಡೆಸುತ್ತಿರುವಾಗಲೇ ಬಿಸಿ ಮುಟ್ಟಿದೆ.

ಪಿಎಫ್‌ಐ ಸಂಘಟನೆ ಅಧ್ಯಕ್ಷನಾಗಿ ಇಝಾಜ್ ಅಹಮದ್ ಬಂಟ್ವಾಳ ವಿರುದ್ಧ ಎನ್‌ಐಎ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಜಾರಿಗೊಳಿಸಿದ್ದರು. ಇದರಿಂದ ಇಝಾಜ್ ಮಂಗಳೂರು ವಿಮಾಣ ನಿಲ್ದಾಣದ ಬದಲು ಕೊಯಮತ್ತೂರು ಏರ್‌ಪೋರ್ಟ್ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸಿದ್ದಾನೆ. ಆದರೆ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಲುಕ್‌ ಔಟ್ ನೋಟಿಸ್ ಇರುವುದು ಪತ್ತೆಯಾದ ಕಾರಣ ತಕ್ಷಣ ಕೊಯಮತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಧ್ಯಮಕ್ಕೆ ಕರೆ ಮಾಡಿ ಬೆದರಿಕೆ; ಬಾಲ ಮುದುರಿಸಿಕೊಂಡು ಕರೆ ಕಟ್
ಬಂಧನ ಕುರಿತಂತೆ ಮಾಧ್ಯಮವೊಂದಕ್ಕೆ ಕರೆ ಮಾಡಿದ್ದ ಮಹಮ್ಮದ್ ಇಕ್ಬಾಲ್, ಬಂಧನ ಆಗಿಲ್ಲ. ಇದು ಸುಳ್ಳು ಮಾಹಿತಿ ಎಂದು ಮಾಧ್ಯಮಕ್ಕೆ ತಪ್ಪು ಸಂದೇಶ ರವಾನೆ ನೀಡಿದ್ದಾನೆ. ಅಷ್ಟು ಮಾತ್ರವಲ್ಲದೆ ಬೆದರಿಕೆ ಹಾಕಿ ಕೊನೆಗೆ ಬಾಲ ಮುದುರಿಸಿಕೊಂಡು ಕರೆ ಕಟ್ ಮಾಡಿದ್ದಾನೆ.

- Advertisement -

Related news

error: Content is protected !!