Thursday, July 23, 2026
spot_imgspot_img
spot_imgspot_img

ಪಿಕಪ್ ಪಲ್ಟಿ: ಮೂವರು ಸಾವು

- Advertisement -
- Advertisement -

ಹಾಸನ : ಅರಸೀಕೆರೆಯ ಚಿಕ್ಕಾರಹಳ್ಳಿ ಗೋಶಾಲೆ ಬಳಿ, ಬೊಲೆರೋ ಪಿಕಪ್ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ.ಕಡೂರು ತಾಲೂಕಿನ ತಂಗ್ಲಿ ಗ್ರಾಮದ ಶಬ್ಬಿರ್(55), ತಿಮ್ಮಣ್ಣ (53), ಸಂಜಯ್ (45) ಮೃ*ತ ದುರ್ದೈವಿಗಳು. ಹಾಸನ ಮೂಲದ ನೌಶದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅರಸೀಕೆರೆಯಿಂದ ಕಡೂರು ಕಡೆಗೆ ಹಸಿ ಅಡಕೆ ಸಾಗಿಸುತ್ತಿದ್ದಾಗ ರಾ.ಹೆ 69ರಲ್ಲಿ ಪಿಕಪ್‌ ನ ಟೈರ್ ಸ್ಫೋಟಗೊಂಡಿದ್ದು, ಇದರ ಪರಿಣಾಮ ವಾಹನದಲ್ಲಿದ್ದ ಅಡಕೆ ಮೂಟೆಗಳು ರಸ್ತೆಗೆ ಬಿದ್ದಿದ್ದು, ಅಡಕೆಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!