Thursday, November 30, 2023
spot_imgspot_img
spot_imgspot_img

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಂಚನ ಕ್ರಾಸ್ ಬಳಿ ನೀರಿಗೆ ಬಿದ್ದ ಪಿಕಪ್ ವಾಹನ.. ಚಾಲಕ ಅಪಾಯದಿಂದ ಅದೃಷ್ಟವಶಾತ್ ಪಾರು

- Advertisement -G L Acharya panikkar
- Advertisement -

ನೆಲ್ಯಾಡಿ:-ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಂಚನ ಕ್ರಾಸ್ ಬಳಿ ನೀರಿನಲ್ಲಿ ಕೊಚ್ಚಿಹೋಗಿದ್ದು ಪಿಕಪ್ ವಾಹನ ಚಾಲಕ ಅಪಾಯದಿಂದ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ.

ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ಆರೀಫ್ ಎಂಬವರು ಚಲಾಯಿಸುತ್ತಿದ್ದ ಪಿಕಪ್ ವಾಹನವು ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ತೋಡಿಗೆ ಬಿದ್ದಿದೆ.ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಸ್ಥಳದಲ್ಲೇ ಇದ್ದ ತೌಫೀಕ್ ಎಂಬವರು ತಕ್ಷಣವೇ ನೀರಿಗಿಳಿದು ಪಿಕಪ್ ವಾಹನಕ್ಕೆ ಹಗ್ಗ ಹಾಕಿ ಸಾರ್ವಜನಿಕರ ಸಹಕಾರದೊಂದಿಗೆ ಪಿಕಪ್ ವಾಹನವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ.ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!