- Advertisement -
- Advertisement -



ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‍ನ 10ನೇ ಸೀಸನ್‍ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿತು.
ಗುಜರಾತ್ ತಂಡದ ರೈಡರ್ ಸೋನು ಜಗ್ಲಾನ್ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 11 ಬಾರಿ ದಾಳಿ ಮಾಡಿ 11 ಪಾಯಿಂಟ್ಸ್ ತಂದುಕೊಟ್ಟು ಯಶಸ್ವಿಯಾದರು. ರಾಕೇಶ್ ಸುಂಗ್ರೋಯಾ 5 ರೈಡ್‍ಗಳಲ್ಲಿ 5 ಅಂಕಗಳಿಸಿದರು. ಈ ಮೂಲಕ ಆತಿಥೇಯ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.
ತೆಲುಗು ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಪಂದ್ಯದಲ್ಲಿ ಸೂಪರ್ 10 ಪಡೆದರು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ತೆಲುಗು ಟೈಟಾನ್ಸ್ ಎಡವಿದ ಕಾರಣ ಗೆಲುವಿಗೆ ಆ ಅಂಕಗಳು ಸಾಕಾಗಲಿಲ್ಲ
- Advertisement -