Friday, April 19, 2024
spot_imgspot_img
spot_imgspot_img

* ಕೊರೊನಾ ರಣಕೇಕೆ :-ದಕ್ಷಿಣ ಕನ್ನಡದಲ್ಲಿ 149 , ಉಡುಪಿ 173 ಮಂದಿಗೆ ಕೊರೊನಾ ಸೋಂಕು : ರಾಜ್ಯದಲ್ಲಿ ಇಂದು 5619 ಮಂದಿಗೆ ಸೋಂಕು..!*

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 5619 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಅಲ್ಲದೇ, 100 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 151449 ಕ್ಕೆಏರಿಕೆಯಾಗಿದೆ.ರಾಜ್ಯದಲ್ಲಿ    ಈವರೆಗೆ 74679 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ 1848 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಒಂದರಲ್ಲೇ 29 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದೆ .ಸಂಖ್ಯೆ ನಗರದಲ್ಲಿ ಇಂದು 3083 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ನಗರದಲ್ಲಿ ಸಕ್ರಿಯ ಪ್ರಕರಣದ 32757 ಮಂದಿಯಲ್ಲಿ  ಪತ್ತೆಯಾಗಿದೆ.

ಮಂಗಳೂರು:- ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ರಣಕೇಕೆ ಹಾಕಿದೆ. ಇಂದು ಕೂಡ 149 ಮಂದಿಗೆ ಸೋಂಕು ತಗುಲಿದೆ. 10 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ. 82 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 6542 ಆಗಿದ್ದು, ಇಲ್ಲಿಯವರೆಗೆ 3009 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.3343 ಮಂದಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 173 ಮಂದಿಗೆ ಪತ್ತೆಯಾಗಿದೆ. ಒಟ್ಟು ಸೊಂಕಿತರ ಸಂಖ್ಯೆ 5142 ಆಗಿದ್ದು ,ಇಲ್ಲಿಯವರೆಗೆ 2978 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2120 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!