Wednesday, November 18, 2026
spot_imgspot_img
spot_imgspot_img

ಟ್ರಂಪ್ ಹತ್ಯೆಗೆ ಸಂಚು – ಪಾಕ್ ಮೂಲದ ಅಪರಾಧಿಗೆ 27 ವರ್ಷ ಜೈಲು ಶಿಕ್ಷೆ

- Advertisement -
- Advertisement -

ವಾಷಿಂಗ್ಟನ್‌: ಅಮೇರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಅಪರಾಧಿಗೆ ನ್ಯೂಯಾರ್ಕ್ ನ್ಯಾಯಾಲಯ 27 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಆಸಿಫ್ ಮರ್ಚೆಂಟ್‌(48) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಸೂಚನೆ ಮೇರೆಗೆ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದ. ಈಗ ನ್ಯಾಯಾಲಯ ಅಪರಾಧಿ ಆಸಿಫ್ ಮರ್ಚೆಂಟ್‌ಗೆ 27 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಮಾಜಿ ಅಧ್ಯಕ್ಷ ಜೋ ಬೈಡನ್, ನಿಕ್ಕಿ ಹ್ಯಾಲಿ ಹತ್ಯೆಗೆ ಸಹ ಈತ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.

2020ರಲ್ಲಿ ಇರಾನ್ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಅಮೆರಿಕದಲ್ಲಿ ಜನರನ್ನು ನೇಮಿಸಿಕೊಳ್ಳಲು ಮರ್ಚೆಂಟ್ ಯತ್ನಿಸಿದ್ದ. ಸುಪಾರಿ ಹಂತಕರನ್ನು ಹುಡುಕುವಾಗ ಆಸಿಫ್ ಅರಿವಿಲ್ಲದೆ FBI ಏಜೆಂಟ್‌ಗಳನ್ನು ಸಂಪರ್ಕಿಸಿದ್ದ. ಇದಾದ ನಂತರ ಆತನ ಯೋಜನೆಯನ್ನು ಎಫ್‌ಬಿಐ ಅಧಿಕಾರಿಗಳು ವಿಫಲಗೊಳಿಸಿದ್ದರು.

2024ರ ಜುಲೈನಲ್ಲಿ ಮರ್ಚೆಂಟ್‌ನ್ನು ಬಂಧಿಸಲಾಗಿತ್ತು. 2026ರ ಮಾರ್ಚ್‌ನಲ್ಲಿ ಮರ್ಚೆಂಟ್‌ನನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು. ಆದರೆ ಇರಾನ್ ಸರ್ಕಾರ ಅಮೆರಿಕ ನಾಯಕರ ಹತ್ಯೆ ಸಂಚಿನ ಆರೋಪವನ್ನು ನಿರಾಕರಿಸಿತ್ತು.

ಆರೋಪಿ ಪಾಕಿಸ್ತಾನಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದ್ದ. ಪಾಕಿಸ್ತಾನ ಮತ್ತು ಇರಾನ್ ಎರಡರಲ್ಲೂ ಈತ ಕುಟುಂಬಗಳನ್ನು ನಿರ್ವಹಿಸುತ್ತಿದ್ದ. ವ್ಯವಹಾರಕ್ಕಾಗಿ ಆಗಾಗ ಅಮೆರಿಕಕ್ಕೆ ಬರುತ್ತಿದ್ದ ಈತ ಕೆಲವು ವರ್ಷಗಳ ಹಿಂದೆ IRGC ಗುಪ್ತಚರರು ಮರ್ಚೆಂಟ್‌ನ ಸಂಪರ್ಕಕ್ಕೆ ಬಂದಿದ್ದರು. ಅವರು ಈತನಿಗೆ ತರಬೇತಿಯನ್ನು ನೀಡಿ, ಹತ್ಯೆಗೆ ನಿಯೋಜಿಸಿದ್ದರು ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!