Thursday, May 2, 2024
spot_imgspot_img
spot_imgspot_img

ಪಿಎಂ ಕಿಸಾನ್ ನಿಧಿಯ 9ನೇ ಕಂತು ಆಗಸ್ಟ್​ 9ರಂದು ರೈತರ ಖಾತೆಗೆ ಜಮೆ; ಹೀಗೆ ಪರಿಶೀಲನೆ ಮಾಡಿ

- Advertisement -G L Acharya panikkar
- Advertisement -

ಪಿಎಂ- ಕಿಸಾನ್ ಯೋಜನೆಯ 9ನೇ ಕಂತಿಗೆ ಕಾಯುತ್ತಿರುವ ರೈತರ ನಿರೀಕ್ಷೆ ಕೊನೆಯಾಗಿದೆ. ಅಂತಹ ಎಲ್ಲ ರೈತರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಸುದ್ದಿ ನೀಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಪಿಎಂ- ಕಿಸಾನ್ ನಿಧಿಯನ್ನು ಆಗಸ್ಟ್ 9ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಎಂಬುದು ಸರ್ಕಾರದ ಯೋಜನೆ. ಇದಕ್ಕೆ ಶೇ 100ರಷ್ಟು ಹಣಕಾಸು ಅನುದಾನವನ್ನು ನೀಡುವುದು ಭಾರತ ಸರ್ಕಾರ. ಇದು ಆರಂಭವಾಗಿದ್ದು ಡಿಸೆಂಬರ್ 1, 2018ರಲ್ಲಿ. ಈ ಯೋಜನೆಯಡಿ 2 ಹೆಕ್ಟೇರ್​ ತನಕ ಒಟ್ಟಾರೆಯಾಗಿ ಭೂಮಿ ಇರುವ/ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ವರ್ಗಾವಣೆ ಆಗುತ್ತದೆ. ಈ ಯೋಜನೆಯಡಿ ಕೆಲವು ವರ್ಗವನ್ನು ಹೊರಗಿಡಲಾಗಿದೆ.

ಈಚಿನ ಕಂತು ಬಂದಿದೆಯೇ ಎಂಬುದನ್ನು ಪರಿಶೀಲಿಸಲು ಹಂತ ಹಂತವಾದ ವಿವರಣೆ ಹೀಗಿದೆ:

1. ಅಧಿಕೃತ ವೆಬ್​ಸೈಟ್​ www.pmkisan.gov.in ಭೇಟಿ ನೀಡಿ.

2. ಅಧಿಕೃತ ವೆಬ್​ಸೈಟ್​ನ ಹೋಮ್​ ಪೇಜ್​ನಲ್ಲಿ ಫಾರ್ಮರ್ಸ್​ ಕಾರ್ನರ್​ ಮೇಲೆ ಕ್ಲಿಕ್ ಮಾಡಬೇಕು.

3. ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

4. ರಾಜ್ಯ, ಜಿಲ್ಲೆ/ಉಪಜಿಲ್ಲೆ, ಬ್ಲಾಕ್​ ಮತ್ತು ಹಳ್ಳಿ ಈ ಮಾಹಿತಿಯನ್ನು ಸರಿಯಾಗಿ ಆರಿಸಬೇಕು.

5. Get Report ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

6. ಸ್ಕ್ರೀನ್ ಮೇಲೆ ಕಾಣುವ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿ ಪಟ್ಟಿ) ಮೇಲೆ ಕ್ಲಿಕ್ ಮಾಡಬೇಕು.

7. ಹೆಸರನ್ನು ಪರಿಶೀಲಿಸಿ, ಖಾತ್ರಿ ಪಡಿಸಬೇಕು.

8. pmskny ಹೋಮ್​ಪೇಜ್​ಗೆ ಮರಳಬೇಕು.

9. ಬೆನಿಫಿಷಿಯರಿ ಸ್ಟೇಟಸ್ ಬಟನ್ ಮೇಲೆ ಮತ್ತೆ ಕ್ಲಿಕ್ ಮಾಡಬೇಕು.

10. ಆಧಾರ್ ಕಾರ್ಡ್ ಮಾಹಿತಿ ಅಥವಾ ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಬೇಕು.

11. get date ಬಟನ್ ಮೇಲೆ ಕ್ಲಿಕ್ ಮಾಡಬೇಕು.

12. ಕಂತಿನ ಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿ ಸ್ಕ್ರೀನ್​ ಮೇಲೆ ಕಾಣಿಸುತ್ತದೆ.

- Advertisement -

Related news

error: Content is protected !!