Saturday, April 27, 2024
spot_imgspot_img
spot_imgspot_img

ಆರು ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶ – ಆರೋಪಿ ಸೆರೆ

- Advertisement -G L Acharya panikkar
- Advertisement -

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನೊಬ್ಬನ ಬಳಿ ಇದ್ದ 1000 ಗ್ರಾಂ ಕೊಕೋನ್ ವಶಪಡಿಸಲಾಗಿದೆ. ಇದು ಅತ್ಯುನ್ನತ ಗುಣಮಟ್ಟದ ಮಾದಕ ದ್ರವ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಆರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮುಂಬೈ ಮಹಾನಗರದಲ್ಲಿ ವಶಪಡಿಸಿಕೊಳ್ಳಲಾದ ಬೃಹತ್ ಪ್ರಮಾಣದ ಮಾದಕ ದ್ರವ್ಯ ಇದಾಗಿದೆ.

ಇದೇ ವೇಳೆ ರಾಷ್ಟ್ರೀಯ ಮಾದಕ ದ್ರವ್ಯ ಬ್ಯೂರೊ ಅಧಿಕಾರಿಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಎರಡು ದಿನಗಳ ಹಿಂದೆ ವೇಷ ಮರೆಸಿ ಮಾಹಿತಿ ಕಲೆಹಾಕುತ್ತಿದ್ದ ಎನ್ ಸಿ ಬಿ ಅಧಿಕಾರಿಗಳ ಮೇಲೆ ಡ್ರಗ್ಸ್ ಪೆಡ್ಲರ್ ಗಳು ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ.

- Advertisement -

Related news

error: Content is protected !!