


ನವದೆಹಲಿ: ಹೊಸದಿಲ್ಲಿ: ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ ಸೇರಿದಂತೆ ಭಾರತ-ಯುರೋಪಿಯನ್ ಯೂನಿಯನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.ಭಾರತ-ಯುರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಈ ಮಹತ್ವದ ಒಪ್ಪಂದವನ್ನು ಮಾಡಲಾಗಿದೆ. “ಭಾರತ ಮತ್ತು ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದವನ್ನು(FTA) ತಲುಪಿವೆ. ಇದು ಜಾಗತಿಕ GDP ಯ 25% ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿದೆ. ಈ ಒಪ್ಪಂದವು 140 ಕೋಟಿ ಭಾರತೀಯರು ಮತ್ತು ಕೋಟ್ಯಂತರ ಯುರೋಪಿಯನ್ನರಿಗೆ ಸಾಕಷ್ಟು ಅವಕಾಶಗಳನ್ನು ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮುಖ್ಯವಾಗಿ ಕರ್ನಾಟಕದ ಯರೋಪಿಗೆ ರಫ್ತಾಗುವ ಎಂಜಿನಿಯರಿಂಗ್ ಗೂಡ್ಸ್, ಎಲೆಕ್ಟ್ರಾನಿಕ್ಸ್, ಫಾರ್ಮಾಸ್ಯುಟಿಕಲ್ಸ್ ಮೆಡಿಕಲ್ ಡಿವೈಸ್‌ಗಳು, ಕೆಮಿಕಲ್ಸ್, ಟೆಕ್ಸ್‌ಟೈಲ್ಸ್ ಮತ್ತು ಅಪಾರೆಲ್ಸ್ ಬೆಲೆ ಇಳಿಕೆಯಾಗಲಿದೆ ಮತ್ತು ರಫ್ತು ಹೆಚ್ಚಾಗಲಿದೆ.
ಒಂದು ವ್ಯಾಪಾರ ಒಪ್ಪಂದಿಂದ 27 ಯರೋಪಿಯನ್ ದೇಶಗಳ ಮಾರುಕಟ್ಟೆ ರಾಜ್ಯಗಳು ಉತ್ಪನ್ನಗಳು ರಫ್ತಾಗಲಿದೆ. ಒಟ್ಟು 6.4 ಲಕ್ಷ ಕೋಟಿ ರೂ.ಗಳ ಬೃಹತ್ ಉತ್ತೇಜನ ರಾಜ್ಯಗಳಿಗೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.








