Monday, April 29, 2024
spot_imgspot_img
spot_imgspot_img

ಉಕ್ರೇನ್​ ಮೇಲೆ ರಷ್ಯಾದ ಸಂಭಾವ್ಯ ಪರಮಾಣು ದಾಳಿ ತಡೆದ ಪ್ರಧಾನಿ ಮೋದಿ: ಸಿಎನ್ಎನ್ ವರದಿ

- Advertisement -G L Acharya panikkar
- Advertisement -

2022ರಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನ ವಿರಾಮ ಏರ್ಪಟ್ಟಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ ಆವರಿಸಿತ್ತು. ಸಾಕಷ್ಟು ಜನರು ಮೃತಪಟ್ಟಿದ್ದರು. ಉಕ್ರೇನ್ ಸರ್ವನಾಶ ಮಾಡಿ ಯುದ್ಧ ಗೆಲ್ಲಲು ನಿರ್ಧರಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೀವ್ ನಗರದ ಮೇಲೆ ನ್ಯೂಕ್ಲಿಯರ್ ದಾಳಿಗೆ ಮುಂದಾಗಿತ್ತು.

ಅಮೆರಿಕ ಈ ಕುರಿತು ಮಾಹಿತಿ ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿತ್ತು. ಈ ವೇಳೆ ಭಾರತ ಸೇರಿದಂತೆ ಇತರ ಕೆಲ ರಾಷ್ಟ್ರಗಳು ಸಂಭಾವ್ಯ ಪರಮಾಣು ದಾಳಿಯನ್ನು ತಡೆಯಲು ಸಹಾಯ ಮಾಡಿವೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆಕೊಟ್ಟ ಪುಟಿನ್​ ಉಕ್ರೇನ್​ ಮೇಲಿನ ಪರಮಾಣು ದಾಳಿ ನಿರ್ಧಾರವನ್ನು ಕೈಬಿಟ್ಟಿದ್ದರು ಎಂದು ಸಿಎನ್​ಎನ್​ ಉಲ್ಲೇಖಿಸಿದೆ. ನಾಗರಿಕ ಹತ್ಯೆಗಳನ್ನು ಖಂಡಿಸುವ ಮತ್ತು ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಪ್ರತಿಪಾದಿಸುವ ಪ್ರಧಾನಿ ಮೋದಿಯವರ ಪ್ರಭಾವ ಮತ್ತು ಸಾರ್ವಜನಿಕ ಹೇಳಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖವಾಗಿವೆ.

ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ, ‘ಇದು ಯುದ್ಧ ಯುಗವಲ್ಲ’. ‘ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿದ್ದರು. ಅದೇ ರೀತಿಯಾಗಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಸಹ ಇದೇ ಮಾತನ್ನು ಪುನರುಚ್ಚರಿಸಿದ್ದರು.

- Advertisement -

Related news

error: Content is protected !!