Friday, April 19, 2024
spot_imgspot_img
spot_imgspot_img

‘ಡೆಲ್ಟಾ ಪ್ಲಸ್’ನಿಂದ ಭಾರತದಲ್ಲಿ ಮೊದಲ ಸಾವು : ಖಚಿತ ಪಡಿಸಿದ ಮಹಾರಾಷ್ಟ್ರ ಆರೋಗ್ಯ ಸಚಿವ

- Advertisement -G L Acharya panikkar
- Advertisement -

ಮುಂಬೈ : ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರದಿAದ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ, ಇದನ್ನ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಖಚಿತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಡೆಲ್ಟಾ ಪ್ಲಸ್ ರೂಪಾಂತರಕ್ಕೆ 21 ರೋಗಿಗಳು ತುತ್ತಾಗಿದ್ದು, ಈ ಪೈಕಿ ಒಬ್ಬರು ಇಂದು ಸಾವನ್ನಪ್ಪಿದ್ದಾರೆ ಎಂದು ಟೋಪೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತಪಟ್ಟ ಸೋಂಕಿತನಿಗೆ 80 ವರ್ಷ ವಯಸ್ಸಾಗಿದ್ದು, ಇತರ ಕಾಯಿಲೆಗಳಿಂದ ಬಳಲುತ್ತಿದ್ದರಂತೆ. ಇಂದು ಈ ವ್ಯಕ್ತಿ ಮೃತಪಟ್ಟಿದ್ದು, ಈ ಮೂಲಕ ಭಾರತದಲ್ಲಿಯೇ ಡೆಲ್ಟಾ ಪ್ಲಸ್ ರೂಪಾಂತರದಿ0ದ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.

ಈ ಡೆಲ್ಟಾ ಪ್ಲಸ್ ರೂಪಾಂತರದಿ0ದಾಗಿ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ 9, ಜಲ್ಗಾಂವ್‌ನಲ್ಲಿ ಏಳು, ಮುಂಬೈ ಮತ್ತು ಪಾಲ್ಘರ್, ಥಾಣೆ ಮತ್ತು ಸಿಂಧುದುರ್ಗ್ ಜಿಲ್ಲೆಗಳಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದ ಆರೋಗ್ಯ ಇಲಾಖೆ ಕಳೆದ ವಾರ ಪ್ರಸ್ತುತಿಯನ್ನ ನೀಡಿದ್ದು, ಇದರಲ್ಲಿ ‘ಡೆಲ್ಟಾ ಪ್ಲಸ್’ ರಾಜ್ಯದಲ್ಲಿ ಕೋವಿಡ್ -19 ರ ಮೂರನೇ ಅಲೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯ ಕೋವಿಡ್ -19 ಕಾರ್ಯಪಡೆಯ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಸದಸ್ಯರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಈ ಹೊಸ ರೂಪ ‘ಡೆಲ್ಟಾ ಪ್ಲಸ್’ ಭಾರತದಲ್ಲಿ ಮೊದಲು ಕಾಣಿಸಿಕೊಂಡ ‘ಡೆಲ್ಟಾ’ ಅಥವಾ ‘ಬಿ .1.617.2’ ಸ್ವರೂಪದಲ್ಲಿನ ‘ರೂಪಾಂತರ’ದಿ0ದ ಕೂಡಿದೆ. ಭಾರತದಲ್ಲಿ ಎರಡನೇ ತರಂಗ ಸೋಂಕಿಗೆ ‘ಡೆಲ್ಟಾ’ ಕೂಡ ಒಂದು ಕಾರಣವಾಗಿತ್ತು.

- Advertisement -

Related news

error: Content is protected !!