Saturday, June 28, 2025
spot_imgspot_img
spot_imgspot_img

ಪಿಎಂ ಮೋದಿ ಪ್ರಧಾನ ಕಾರ್ಯದರ್ಶಿಯ ಮಗಳು, ಅಳಿಯನ ಸೋಗಿನಲ್ಲಿ ವಂಚನೆ; ಓಡಿಶಾ ದಂಪತಿ ಅರೆಸ್ಟ್..!

- Advertisement -
- Advertisement -

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಂಧಮಾಲ್ ಜಿಲ್ಲೆಯ ನಿವಾಸಿ ಪತ್ನಿ ಹನ್ಸಿತಾ ಅಭಿಲಿಪ್ಸಾ (38) ಹಾಗೂ ಪತಿ ಅನಿಲ್ ಕುಮಾರ್ ಮೊಹಂತಿ ಎಂದು ಗುರುತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಈ ದಂಪತಿ ಜನರನ್ನು ವಂಚಿಸುತ್ತಿದ್ದರು. ಹಾಗೂ ನಾವು ಪ್ರಭಾವಿಗಳ ಸಂಪರ್ಕವನ್ನು ಹೊಂದಿದ್ದೇವೆ ಎಂದು ಹೇಳಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ದಂಪತಿಯ ನಿವಾಸದಲ್ಲಿ ಹಲವಾರು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ದೊರೆತಿದ್ದು, ತಂತ್ರಜ್ಞಾನದ ಮೂಲಕ ಉನ್ನತ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳನ್ನು ರಚಿಸಿದ್ದಾರೆ. ಈ ಫೋಟೋಗಳನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದರು, ಸದ್ಯ ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಭುವನೇಶ್ವರದಲ್ಲಿ ಈಗಾಗಲೇ ಶ್ರೀಮಂತ ಉದ್ಯಮಿ, ಬಿಲ್ಡರ್‌ಗಳು, ಗಣಿಗಾರಿಕೆಯ ನಿರ್ವಾಹಕರು ಸೇರಿದಂತೆ ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಗಣಿ ಮಾಲೀಕರ ದೂರಿನ ಮೇರೆಗೆ ದಂಪತಿಯನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329 (3), 319 (2), 318 (4), ಮತ್ತು 3 (5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!