Friday, March 29, 2024
spot_imgspot_img
spot_imgspot_img

ಪಿ ಎಂ ನರೇಂದ್ರ ಮೋದಿ ಅಕ್ಟೋಬರ್​ 15ಕ್ಕೆ ಬಿಡುಗಡೆ

- Advertisement -G L Acharya panikkar
- Advertisement -

ಟ ವಿವೇಕ್ ಒಬೇರಾಯ್​ ಅಭಿನಯದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾ ಅಕ್ಟೋಬರ್​ 15ರಂದು ರಿಲೀಸ್​ ಆಗಲಿದೆ. ಲಾಕ್​ಡೌನ್​ ಸಡಿಲಿಕೆ ಬಳಿಕ ಥೀಯೇಟರ್​​ಗಳಿಗೆ ಲಗ್ಗೆ ಇಡಲಿರೊ ಮೊದಲ ಸಿನಿಮಾ ಇದಾಗಲಿದೆ.

ಈಗ 5ನೇ ಹಂತದ ಲಾಕ್​ಡೌನ್ ವಿನಾಯಿತಿಯಲ್ಲಿ ಥೀಯೇಟರ್​​ಗಳ ಪುನರಾರಂಭಕ್ಕೆ ಗ್ಲೀನ್ ಸಿಗ್ನಲ್ ಸಿಕ್ಕಿದೆ. ಕೆಲವು ಮಾರ್ಗಸೂಚಿಗಳನ್ನ ಪಾಲಿಸಿ, ಥಿಯೇಟರ್​ಗಳು ಮತ್ತೆ ಕಾರ್ಯಾರಂಭ ಮಾಡಬಹುದಾಗಿದೆ.

ಪಿಎಂ ನರೇಂದ್ರ ಮೋದಿ ಸಿನಿಮಾ ಕಳೆದ ವರ್ಷ ಮೇನಲ್ಲಿ ರಿಲೀಸ್ ಆಗಿತ್ತು. ಈಗ ಮತ್ತೆ ಚಿತ್ರದ ರೀರಿಲೀಸ್​ ದಿನಾಂಕವನ್ನ ಘೋಷಿಸಿರೋ ನಿರ್ಮಾಪಕ ಸಂದೀಪ್ ಸಿಂಗ್, ನರೇಂದ್ರ ಮೋದಿ ದೇಶದ ಅತ್ಯುತ್ತಮ ಪ್ರಧಾನಮಂತ್ರಿ ಎಂಬುದು 2019ರ ಚುನಾವಣೆಯಲ್ಲಿ ಸಾಬೀತಾಗಿದೆ.

ಈಗ ಥಿಯೇಟರ್​​ಗಳು ಪುನರಾರಂಭವಾಗುತ್ತಿರುವಾಗ, ಇಂದಿನ ಯುಗದ ಅತ್ಯಂತ ಸ್ಫೂರ್ತಿದಾಯಕ ನಾಯಕನ ಜೀವನಚರಿತ್ರೆಯನ್ನ ನೋಡುವುದಕ್ಕಿಂತ ಉತ್ತಮವಾದಯದಯ ಏನಿದೆ? ಎಂದು ಇನ್ಸ್​​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!