Tuesday, July 1, 2025
spot_imgspot_img
spot_imgspot_img

ಸೆ.22ರಂದು ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ

- Advertisement -
- Advertisement -

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆ.22ಕ್ಕೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ.

ಸೆಪ್ಟೆಂಬರ್ 22 ರಂದು ವಾಷಿಂಗ್ಟನ್ ಡಿಸಿಗೆ ತೆರಳಲಿರುವ ಮೋದಿ ಸೆ.23ರಂದು ಬೆಳಗ್ಗೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಜೊತೆ ಕೂಡ ಮೋದಿ ಸಭೆ ನಡೆಸಲಿದ್ದಾರೆ ಅಂತ ಹೇಳಲಾಗ್ತಿದೆ.

ಜೋ ಬೈಡನ್​ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಪ್ರಧಾನಿ ಮೋದಿ ಮತ್ತು ಬೈಡನ್​ ನಡುವೆ ಫೋನ್​ನಲ್ಲಿ ಮಾತುಕತೆ ನಡೆದಿದೆ. ಅದು ಬಿಟ್ಟರೆ ಪರಸ್ಪರ ಭೇಟಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇವರಿಬ್ಬರ ಭೇಟಿ ಆಗಲಿದೆ. ಜೊತೆಗೆ ಭಾರತ ಮೂಲದ ಕಮಲಾ ಹ್ಯಾರಿಸ್​ ಜತೆಗೂ ಕೂಡ ಮೋದಿಯವರು ಇದೇ ಮೊದಲ ಸಲ ದ್ವಿಪಕ್ಷೀಯ ಸಭೆ ಹಮ್ಮಿಕೊಂಡಿದ್ದಾರೆ.

- Advertisement -

Related news

error: Content is protected !!