Thursday, July 23, 2026
spot_imgspot_img
spot_imgspot_img

ಶಾಲಾ ರಜೆಯಲ್ಲಿ ಕೆಲಸಕ್ಕೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಅಂಗಡಿ ಮಾಲೀಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

- Advertisement -
- Advertisement -

ಸುಳ್ಯ: ಶಾಲಾ ರಜೆ ಹಿನ್ನೆಲೆ ಕೆಲಸಕ್ಕೆ ಸೇರಿದ್ದ ಅಪ್ರಾಪ್ತ ಬಾಲಕಿಗೆ ಅಂಗಡಿ ಮಾಲೀಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ಸಂತ್ರಸ್ತ ಬಾಲಕಿ ದಿನಾಂಕ 01.04.2026 ರಂದು ಸುಳ್ಯ ಠಾಣಾ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು.

ಮರುದಿನವಾದ 02.04.2026ರ ಬೆಳಿಗ್ಗೆ ಅಂಗಡಿಗೆ ಬಂದ ವೇಳೆ ಅಂಗಡಿ ಮಾಲೀಕ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.ಈ ಕುರಿತು ಬಾಲಕಿ ದಿನಾಂಕ 08.04.2026 ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 50/2026ರಂತೆ ಕಲಂ 75 BNS 2023 ಹಾಗೂ ಪೋಕ್ಸೋ ಕಾಯ್ದೆಯ ಕಲಂ 8, 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!