Thursday, May 9, 2024
spot_imgspot_img
spot_imgspot_img

ಬಂಟ್ವಾಳ : ಡಾಮಾರು ಕಳ್ಳತನ ಮಾಡುತ್ತಿದ್ದ ವೇಳೆ ಪೊಲೀಸ್ ದಾಳಿ

- Advertisement -G L Acharya panikkar
- Advertisement -

ಬಂಟ್ವಾಳ : ಡಿಸೆಂಬರ್‌ 8 ರಂದು ರಾತ್ರಿ ಸಮಯ ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಮಾರು ಲೋಡ್‌ ಮಾಡಿಕೊಂಡು ಬಂದ ಟ್ಯಾಂಕರ್‌ಗಳಿಂದ, ಅಕ್ರಮವಾಗಿ ಬೇರೆ ಟ್ಯಾಂಕರ್‌ಗಳಿಗೆ ಡಾಮಾರ್‌ನ್ನು ವರ್ಗಾಯಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ ನಡೆದಿದೆ.

ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಮಾರು ಲೋಡ್‌ ಮಾಡಿಕೊಂಡು ಬಂದ ಟ್ಯಾಂಕರ್‌ಗಳಿಂದ, ಅಕ್ರಮವಾಗಿ (ಕಳ್ಳತನದ ಮೂಲಕ) ಬೇರೆ ಟ್ಯಾಂಕರ್‌ಗಳಿಗೆ ಡಾಮಾರ್‌ನ್ನು ವರ್ಗಾಯಿಸುತ್ತಿದ್ದಾಗ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ್.ಟಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿರುತ್ತಾರೆ.

ಈ ವೇಳೆ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಡುಪಿಯ ವಿಜಯಕುಮಾರ್‌ ಶೆಟ್ಟಿ ಎಂಬವರ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ@ಸುಧಾಕರ ಕೊಟ್ಟಾರಿ ಎಂಬರೊಂದಿಗೆ ಸೇರಿ ಈ ಕೃತ್ಯವನ್ನು ನಡೆಯುತ್ತಿರುವುದು ಬೆಳಕಿಗೆ ಬಂದಿರುತ್ತದೆ. ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ AP03X6149, KL43C3968, KA19AC4077, KA19AC8686, KA19AA7342, KA19AD6595 ನೋಂದಣಿ ಸಂಖ್ಯೆಯ ಟ್ಯಾಂಕರ್‌ ಲಾರಿಗಳನ್ನು, ಡಾಮಾರ್‌ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ -1, ಡಾಮಾರ್‌ ಬಿಸಿಮಾಡಲು ಉಪಯೋಗಿಸಿದ ಗ್ಯಾಸ್‌ ಸಿಲಿಂಡರ್‌ -1, ಡಾಮಾರ್‌ ತುಂಬಿಸಲು ಬಳಸಿರುವ ಕಬ್ಬಿಣದ ಟ್ಯಾಂಕ್‌ -1, 9 ಮೊಬೈಲ್‌ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ವಿಜಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ @ಸುಧಾಕರ, ಮಹಮ್ಮದ್ ಇಮ್ರಾನ್, ಅಶ್ರಪ್.ಎಂ , ವಿರೇಂದ್ರ.ಎಸ್.ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್, ಎಂ,ಜಿ, ಮಹಮ್ಮದ್ ನಿಸಾರ್, ಮಹಮ್ಮದ್ ಸಿಹಾಬುದ್ದೀನ್ ಎಂಬವರುಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 122/2023 ಕಲಂ : 379, 417, 420, 285 ಭಾ.ದ.ಸಂ ಮತ್ತು ಕಲಂ: 23 ಪೆಟ್ರೋಲಿಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
.

- Advertisement -

Related news

error: Content is protected !!