Sunday, June 29, 2025
spot_imgspot_img
spot_imgspot_img

ಕುಂದಾಪುರ: ಬೈಕ್ ಕಳವು ಪ್ರಕರಣ ಭೇದಿಸಿದ ಪೊಲೀಸರು – ಆರೋಪಿಯ ಬಂಧನ

- Advertisement -
- Advertisement -

ಕುಂದಾಪುರ: ಇತ್ತೀಚಿಗೆ ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜು ರಸ್ತೆಯಲ್ಲಿಯಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದ ಬಳಿ ನಿಲ್ಲಿಸಿದ್ದ ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್‌ ಬೈಕನ್ನು ಕಳ್ಳನೊಬ್ಬ ಎಗರಿಸಿದ್ದ.

ಇದೀಗ ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ರಂಜಿತ್ (25) ಮೇಲೆ ಐದಕ್ಕೂ ಹೆಚ್ಚು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಕುಂದಾಪುರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಯು.ಬಿ ನಂದಕುಮಾರ್‌, ಪಿ.ಎಸ್.ಐ ವಿನಯ ಕೊರ್ಲಹಳ್ಳಿ, ಪಿ.ಎಸ್.ಐ ಪ್ರಸಾದ ಕುಮಾರ್.ಕೆ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಮಾರ್, ಶ್ರೀಧರ್, ರಾಮ ಹಾಗೂ ಬೈಂದೂರು ಠಾಣಾ ಅಪರಾಧ ವಿಭಾಗದ ಸಿಬ್ಬಂದಿರವರು ಆರೋಪಿಯಾದ ರಂಜಿತ್‌ (25), ಕಾಲ್ತೋಡು ಗ್ರಾಮ ಎಂಬಾತನನ್ನು ಬೈಂದೂರು ಜಂಕ್ಷನ್‌ ಬಳಿಯಲ್ಲಿ ಪತ್ತೆ ಮಾಡಿ ಆರೋಪಿಯು ಕಳವು ಮಾಡಿದ ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್‌ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!