Sunday, February 9, 2025
spot_imgspot_img
spot_imgspot_img

ಉಡುಪಿ: 36.9 ಲಕ್ಷ ರೂ. ಮೌಲ್ಯದ ಮೊಬೈಲ್ ಟವರ್ ಕಳವು; ಪ್ರಕರಣ ದಾಖಲು..!

- Advertisement -
- Advertisement -

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಹೋಬಳಿಯ ಕಲ್ಯಾಣಪುರ ಗ್ರಾಮದಲ್ಲಿ ಮೊಬೈಲ್ ಟವರ್ ಕಳವು ಪ್ರಕರಣವೊಂದು ವರದಿಯಾಗಿದೆ.

ಜಿಟಿಎಲ್ ಮೊಬೈಲ್ ಕಂಪನಿಗೆ ಸೇರಿದ ಮೊಬೈಲ್ ಟವರ್ ಅನ್ನು ಕಲ್ಯಾಣಪುರದಲ್ಲಿ ಸ್ಥಾಪಿಸಿದ ಸ್ಥಳದಿಂದ ಕಳವು ಮಾಡಲಾಗಿದೆ ಎಂದು ವರದಿಯಾಗಿದೆ. ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನ ಅಧಿಕೃತ ಅಧಿಕಾರಿ ಸಂದೀಪ್ ಎಂಬವರು ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.

2023ರ ಮಾರ್ಚ್ 31 ರಂದು ಕಂಪನಿಯ ತಂತ್ರಜ್ಞರು ನಡೆಸಿದ ದಿನನಿತ್ಯದ ಪರಿಶೀಲನೆಯ ಸಂದರ್ಭದಲ್ಲಿ ಸರ್ವೆ ನಂಬರ್ 232/2b2-p2 ರಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಕಾಣೆಯಾಗಿರುವುದು ಕಂಡುಬಂದಿದೆ. ಕಳ್ಳತನ ನಡೆದಿರುವುದು ಬೆಳಕಿಗೆ ಬಂದ ತಕ್ಷಣ ಕಂಪನಿಗೆ ಮಾಹಿತಿ ನೀಡಲಾಯಿತು ಮತ್ತು ಆಂತರಿಕ ತನಿಖೆಯ ಮೂಲಕ ಅಪರಿಚಿತ ವ್ಯಕ್ತಿಗಳು ಟವರ್ ಅನ್ನು ಕಳವು ಮಾಡಿದ್ದಾರೆ ಎಂದು ದೃಢಪಟ್ಟಿದೆ.

ಕಳವು ಮಾಡಿದ ಆಸ್ತಿಯ ಮೌಲ್ಯ 36,92,992 ರೂಪಾಯಿಗಳಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!