Friday, June 5, 2026
spot_imgspot_img
spot_imgspot_img

ಬಂದೂಕು ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರಿಂಗ್; ಪೊಲೀಸ್ ದುರ್ಮರಣ

- Advertisement -
- Advertisement -

ದಾವಣಗೆರೆ: ಬಂದೂಕು ಸ್ವಚ್ಛ ಮಾಡುವ ಮಿಸ್ ಫೈರಿಂಗ್ ಆಗಿ ಓರ್ವ ಪೊಲೀಸ್ ಸಾವನ್ನಪ್ಪಿರುವ ಘಟನೆ ದಾವಣೆಗೆರೆಯ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ನಡೆದಿದೆ.

ಆರ್. ಚೇತನ್ (28) ಸಾವನ್ನಪ್ಪಿರುವ ಡಿಎಆರ್ ಪೊಲೀಸ್. ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿಯಾಗಿದ್ದು, 2012 ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಪೊಲೀಸ್ ಬಂದೂಕು ಸ್ವಚ್ಛ ಮಾಡುವಾಗ ಮಿಸ್ ಫೈರಿಂಗ್ ಆಗಿ ಚೇತನ್ ಕುತ್ತಿಗೆ ಭಾಗಕ್ಕೆ ಬುಲೆಟ್ ಬಿದ್ದಿದೆ. ತಕ್ಷಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೂರ್ವ ವಲಯ ಐಜಿಪಿ ಎಸ್. ರವಿ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!