Thursday, June 18, 2026
spot_imgspot_img
spot_imgspot_img

ಉಳ್ಳಾಲ‌ ಪೊಲೀಸರ ಭರ್ಜರಿ ಕಾರ್ಯಾಚರಣೆ. ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ, ಇಬ್ಬರು ಬಂಧನ.!

- Advertisement -
- Advertisement -

ಮಂಗಳೂರು: ತೊಕ್ಕೊಟ್ಟಿನಿಂದ ಕೇರಳಕ್ಕೆ ಕಾರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಪೊಲೀಸ್ ಉಪವಿಭಾಗದ ಎಸಿಪಿಯವರ ನಿರ್ದೇಶನದಂತೆ ಉಳ್ಳಾಲ ಠಾಣಾಧಿಕಾರಿ ನೇತೃತ್ವದಲ್ಲಿ ಬಂಧಿಸಲಾಗಿದೆ.

ದಾಖಲೆಗಳಿಲ್ಲದ ಮಾರುತಿ 800 ಕಾರಲ್ಲಿ ಅಕ್ರಮ ಮದ್ಯ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕೋಟೆಕಾರು ಅಜ್ಜನಕಟ್ಟೆ ಬಳಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ಬಳಿ ಕಾರು ನಿಲ್ಲಿಸಲು ಸೂಚಿಸಿದಾಗ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಸುತ್ತುವರಿದು ಕಾರಿಗೆ ಅಡ್ಡಗಟ್ಟಿ ಇಬ್ಬರನ್ನು ಬಂಧಿಸಿದ್ದಾರೆ.ಕಾಸರಗೋಡಿನ ಬಂದ್ಯೋಡು ಮಂಗಳಪಾಡಿಯ ರೆಜಿನ್ (23) ಮತ್ತು ಧೀರಜ್ (21) ಬಂಧಿತರು.

ತೊಕ್ಕೊಟ್ಟುವಿನಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸಲಾಗುತಿತ್ತು. 225 ಲೀಟರ್ ಅಕ್ರಮ ಮದ್ಯ ಮತ್ತು ಮಾರುತಿ 800 ವಾಹನ ಸೇರಿದಂತೆ ಒಟ್ಟು ರೂ. 2 ಲಕ್ಷ ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!