Sunday, April 28, 2024
spot_imgspot_img
spot_imgspot_img

ಕಾಸರಗೋಡು: ನಿಷೇಧಿತ ಪಾನ್ ಮಸಾಲ ಉತ್ಪನ್ನ ವಶ; ಇಬ್ಬರ ಬಂಧನ

- Advertisement -G L Acharya panikkar
- Advertisement -

ಕಾಸರಗೋಡು: ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಭಾರೀ ಮೌಲ್ಯದ ನಿಷೇಧಿತ ಪಾನ್ ಮಸಾಲ ಉತ್ಪನ್ನಗಳನ್ನು ವಿದ್ಯಾನಗರ ಠಾಣಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಮುಟ್ಟತ್ತೋಡಿ ಚೆಟ್ಟುಂಗುಯಿ ಪಳ್ಳಂ ಹೌಸ್ ನ ಪಿ.ಎಚ್ ಕಮರುದ್ದೀನ್ (32) ಮತ್ತು ಚೆಟ್ಟುಂಗುಯಿಯ ರಿಷಾದ್ ಎಂ.ಸಿ ( 26) ಬಂಧಿತರು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಚೆಟ್ಟುಂಗುಯಿಯಲ್ಲಿನ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿದಾಗ ಪಾನ್ ಮಸಾಲ ಉತ್ಪನ್ನಗಳ ದಾಸ್ತಾನು ಪತ್ತೆಯಾಗಿದೆ. ಹತ್ತಕ್ಕೂ ಅಧಿಕ ಪ್ಲಾಸ್ಟಿಕ್ ಗೋಣಿಗಳಲ್ಲಿ ತುಂಬಿಸಿಡಲಾಗಿತ್ತು. ಇದನ್ನು ಜಿಲ್ಲೆಯ ವಿವಿದೆಡೆಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇನ್ನು ಕರ್ನಾಟಕದಿಂದ ತಂದು ಈ ಬಾಡಿಗೆ ಮನೆಯಲ್ಲಿ ದಾಸ್ತಾನಿಟ್ಟು ಬಳಿಕ ಹಲವೆಡೆ ಮಾರಾಟ ಮಾಡುತ್ತಿದ್ದರು. ವಶಪಡಿಸಿಕೊಂಡ ಉತ್ಪನ್ನಗಳ ಮೌಲ್ಯ ಸುಮಾರು ಮೂರುವರೆ ಲಕ್ಷ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!