- Advertisement -
- Advertisement -




ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಗೂಡುದೊಟ್ಟು ಬಳಿ ಕೋಳಿ ಅಂಕದಲ್ಲಿ ನಿರತರಾಗಿದ್ದ 7 ಮಂದಿಯನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಳಿ ಅಂಕದಲ್ಲಿ ನಿರತರಾಗಿದ್ದ ವಿಜಯ್ ಪ್ರಕಾಶ್ ಕ್ಯಾಡ್ರಸ್, ಸುರೇಶ್, ಫ್ರಾನ್ಸಿಸ್ ದೀಪಕ್ ಮೆಂಡೋನ್ಸಾ ಪ್ರಜ್ವಲ್ ಜೋಸೆಫ್ ಮಾರ್ಟಿಸ್, ಪ್ರದೀಪ್, ಸಂತೋಷ್ ಮತ್ತು ಸುಜಿತ್ಯ ಅವರನ್ನು ಶಿರ್ವ ಪೊಲೀಸರ ತಂಡ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯಕ್ಕೆ ಬಳಸಿದ್ದ ನಗದು 7850 ರೂ., 4 ಹುಂಜ, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -