Tuesday, July 1, 2025
spot_imgspot_img
spot_imgspot_img

**ಬೆಂಗಳೂರಿನಿಂದ ಬಂದು ತಲೆ ಮರೆಸಿಕೊಂಡು ಅಡಗಿದ್ದ ಅಪಹರಣಕಾರರ ಬಂಧನ**

- Advertisement -
- Advertisement -

ಮಂಡ್ಯ ಸೆ. 25 : ಬೆಂಗಳೂರಿನ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕ್ಕೆ ಇಟ್ಟು ಮಂಡ್ಯ ಜಿಲ್ಲೆಯ ಲಾಡ್ಜ್ ವೊಂದರಲ್ಲಿ ತಲೆ ಮರೆಸಿಕೊಂಡಿದ್ದ 7 ಜನ ಅಪಹರಣಕಾರರನ್ನು ಬಂಧಿಸಿ ಸಾಹಸ ಮೆರೆದಿದ್ದಾರೆ.


ಪಟ್ಟಣದ ಲಾಡ್ಜ್ ವೊಂದರಲ್ಲಿ‌ ಬೆಂಗಳೂರಿನಿಂದ ಬಂದು ತಲೆ ಮರೆಸಿಕೊಂಡು ಅಡಗಿದ್ದ 7 ಜನ ಅಪಹರಣಾಕಾರರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಮೂಲಕ ಸಾಹಸ ಮೆರೆದಿದ್ದಾರೆ.

ಈ ಸಂಬಂಧ ಯುವಕನ‌ ಪೋಷಕರು ತಿಲಕ್ ನಗರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಪೋಷಕರ ದೂರಿನ ಮೇರೆಗೆ ಮಾಹಿತಿ ಕಲೆ ಹಾಕಿದ  ತಿಲಕನಗರ ಆರೋಪಿಗಳು ಕರೆ ಮಾಡಿದ ಪೋನ್ ನಂಬರ್ ಮತ್ತು ಲೋಕೇಶನ್ ಆಧಾರದ ಮೇಲೆ ಆರೋಪಿಗಳು ನಾಗಮಂಗಲದಲ್ಲಿ ಇರುವುದನ್ನು‌ ಪತ್ತೆ ಹಚ್ಚಿದ್ದರು. ಬಳಿಕ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ರವಾನಿಸಿ ಆರೋಪಿಗಳ ಬಂಧನಕ್ಕೆ ಸ್ಥಳೀಯ ಪೊಲೀಸರ ನೆರವು ಕೋರಿದ್ದರು.

ಇನ್ನು ಈ ಪ್ರಕರಣದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿಗಳಾಗಿದ್ದ ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಎಂಬ ಯುವಕರೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪಹರಣಾಕಾರಾಗಿದ್ದಾರೆ.

ಈ 7 ಜನರು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನನ್ನು ಅಪಹರಿಸಿದ್ದರು‌. ಬಳಿಕ ಯುವಕನ‌ ಪೋಷಕರಿಗೆ ಕರೆ ಮಾಡಿ 30 ಲಕ್ಷ ಬೇಡಿಕೆ ಇಟ್ಟಿದ್ದರು.

- Advertisement -

Related news

error: Content is protected !!