ಬೆಂಗಳೂರು: ನಾಳೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಿಲಾನ್ಯಾಸ ನಡೆಯುವ ವೇಳೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಶ್ರೀರಾಮಮಂದಿರವು ಮಂಗಳಕರವಾಗಿ ಪೂರ್ಣಗೊಳ್ಳುವಂತೆ ಪಾರ್ಥಿಸಿ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳು ಹಾಗೂ ಖಾಸಗಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಈ ಸುತ್ತೋಲೆ ಹೊರಡಿಸಿದೆ.



ರಾಮಮಂದಿರ ಶಿಲಾನ್ಯಾಸ ವೇಳೆ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ:ಹಾಗೂ ರಾಜ್ಯದ ಎಲ್ಲಾ ಮನೆಗಳಲ್ಲೂ ವಿಶೇಷ ಪೂಜೆ,ಪ್ರಾರ್ಥನೆ ಮಾಡುವಂತೆಯೂ ಸಚಿವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ಮಾಡಿದ್ದಾರೆ.
Posted by VTV on Tuesday, 4 August 2020
ಮುಖ್ಯಮಂತ್ರಿ ಬಿಎಸ್ ವೈ ನಿರ್ದೇಶನದಂತೆ ಸಚಿವರ ಸೂಚನೆ ಯಂತೆ, ಎಲ್ಲಾ ದೇವಾಲಯದಲ್ಲಿ ಕೋವಿಡ್ ನಿಯಮ ಪಾಲಿಸಿ ಎಲ್ಲಾ ಅರ್ಚಕರು ಪೂಜೆ ನಡೆಸಬೇಕು.ಹಾಗೂ ರಾಜ್ಯದ ಎಲ್ಲಾ ಮನೆಗಳಲ್ಲೂ ವಿಶೇಷ ಪೂಜೆ,ಪ್ರಾರ್ಥನೆ ಮಾಡುವಂತೆಯೂ ಸಚಿವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ಮಾಡಿದ್ದಾರೆ.
