Friday, April 19, 2024
spot_imgspot_img
spot_imgspot_img

ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು!!

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಮತ್ತು ಸಿಎಂ ಸುಪುತ್ರನ ಮೇಲಿನ ಹಗರಣದ ಆರೋಪವನ್ನು ಪ್ರಸಾರ ಮಾಡಿ ಭಾರೀ ತೊಂದರೆಗೆ ಹಾಗು ಕಿರುಕುಳಕ್ಕೆ ಒಳಪಟ್ಟಿದ್ದ ಕನ್ನಡ ಸುದ್ದಿವಾಹಿನಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿಯವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ರಾಜ್ಯ ಹೈಕೋರ್ಟ್ ವೈಯಕ್ತಿಕ ಬಾಂಡ್ 2 ಲಕ್ಷ ರೂಪಾಯಿ, ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ವಿಧಿಸಿದೆ. ಇದನ್ನು 20 ದಿನಗಳೊಳಗೆ ತನಿಖಾಧಿಕಾರಿ ಮುಂದೆ ಸಲ್ಲಿಸುವಂತೆ ಹಾಗೂ ತನಿಖೆಗೆ ಎಲ್ಲಾ ರೀತಿಯಿಂದಲೂ ಸಹಕರಿಸುವಂತೆ, ಕೋರ್ಟ್ನ ಅನುಮತಿಯಿಲ್ಲದೆ ತ್ವರಿತ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗದಂತೆಯೂ ನ್ಯಾಯಮೂರ್ತಿಗಳಾದ ಬಿ ಎ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ಕಾರ್ಯಕ್ರಮ ಪವರ್ ಟಿವಿಯಲ್ಲಿ ಪ್ರಸಾರವಾದ ಬಳಿಕ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಸರ್ಕಾರವು ಚಾನಲ್‌ನ ನೇರಪ್ರಸಾರವನ್ನು ಸ್ಥಗಿತಗೊಳಿಸಿತ್ತು. ಬಳಿಕ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪೆನಿ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ, ರಾಕೇಶ್ ಶೆಟ್ಟಿ ವಿರುದ್ಧ ಬಿಡಿಎಯಿಂದ ಹಣ ಮಂಜೂರು ಮಾಡಿಸಲು ಲಂಚ ಕೇಳಿದ್ದರು ಎಂದು ದೂರು ನೀಡಿದ್ದರ ಮೇಲೆ ಬಂಧನವಾಗಿತ್ತು.

- Advertisement -

Related news

error: Content is protected !!