Monday, May 20, 2024
spot_imgspot_img
spot_imgspot_img

ವಿಟ್ಲ: ಬಜರಂಗದಳದ ಮುಖಂಡನಿಗೆ ಹಲ್ಲೆ ಪ್ರಕರಣ; ಕೌಂಟರ್‌ ಕೇಸ್‌ನಲ್ಲಿ ಏನಿದೆ..? 6 ಮಂದಿಯ ವಿರುದ್ಧ ಪ್ರಕರಣ ದಾಖಲು

- Advertisement -G L Acharya panikkar
- Advertisement -

ವಿಟ್ಲ: ಬಜರಂಗದಳ ವಿಟ್ಲ ಪ್ರಖಂಡದ ಸಂಚಾಲಕ ಚಂದ್ರಹಾಸ ಕನ್ಯಾನ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈಗ ಹಲ್ಲೆಗೈದ ತಂಡವೂ ವಿಟ್ಲ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಸಾಲೆತ್ತೂರು ಗ್ರಾಮದ ಅಗರಿ ಎಂಬಲ್ಲಿ

ಕೃತ್ಯ ನಡೆದಿತ್ತು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿತ್ತು. ಈಗ ಚಂದ್ರಹಾಸ ಕನ್ಯಾನ ಅವರಿಗೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ತಂಡ ದೂರು ನೀಡಿದೆ. ಸುರತ್ಕಲ್ ನಿವಾಸಿಯಾಗಿರುವ ಪ್ರಶಾಂತ ಅಲಿಯಾಸ್ ಪಚ್ಚು ಪ್ರತಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮತ್ತೊಂದು ತಂಡ 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಈಗ ಪ್ರಶಾಂತ್ ಅವರ ತಂಡ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಚಂದ್ರಹಾಸ, ನಾಗೆಶ್‌, ದೇವದಾಸ ಹಾಗೂ ಇತರ 03 ಜನರ ವಿರುದ್ಧ ಕೇಸ್ ದಾಖಲಾಗಿದೆ.

ದೂರಿನಲ್ಲಿ ಏನಿದೆ..?
ದೂರುದಾರರು ಆಪ್ತ ಹುಡುಗರ ಮದ್ಯೆ ಇದ್ದ ವೈಮನಸ್ಸಿನ ಬಗ್ಗೆ ಮಾತನಾಡಲು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ನಾಗೇಶ್‌ರವರ ಮನೆಯ ಬಳಿ ಹೋಗಿದ್ದಾರೆ. ನಾಗೇಶ್‌, ಚಂದ್ರಹಾಸ, ದೇವದಾಸರವರೊಂದಿಗೆ ಮಾತನಾಡುತ್ತಿರುವಾಗ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಪ್ರಶಾಂತ್ (ದೂರುದಾರರು) ಎಂಬವರನ್ನು ಕೊಲೆ ಮಾಡುವ ಉದ್ದೇಶದಿಂದ ದೇವದಾಸ ಎಂಬಾತ ಹಿಂದಿನಿಂದ ಬಿಗಿಯಾಗಿ ಹಿಡಿದುಕೊಂಡು ಚಂದ್ರಹಾಸ ಕನ್ಯಾನ ಚಾಕುವಿನಿಂದ ಪ್ರಶಾಂತ್ ಎಂಬಾತನ ಹೊಟ್ಟೆಯ ಭಾಗಕ್ಕೆ ಮತ್ತು ಕುತ್ತಿಗೆಗೆ ಚುಚ್ಚಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಪ್ರಶಾಂತ್ ಎಂಬಾತನ ಬೆನ್ನಿಗೆ ಚುಚ್ಚಿದ್ದಾನೆ. ಬಳಿಕ ಹಲ್ಲೆಗೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಜೀವ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಎಂದು ಪ್ರಶಾಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಪಿರ್ಯಾಧಿದಾರರನ್ನು ಅಪರಿಚ ವ್ಯಕ್ತಿ ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಪ್ರಶಾಂತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

vtv vitla
- Advertisement -

Related news

error: Content is protected !!