



ಬೋಳಂತೂರು: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮಾಣಿ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಬೋಳಂತೂರು ಗ್ರಾಮದ ಭಾರತೀಯ ಜನತಾ ಪಾರ್ಟಿಯ ಅಭ್ಯಾಸ ವರ್ಗವು ತುಳಸಿವನ ಮಂದಿರದ ವಠಾರದಲ್ಲಿ ನಡೆಯಿತು.
ಪಕ್ಷದ ಹಿರಿಯರಾದ ರಾಕೋಡಿ ಈಶ್ವರ ಭಟ್, ಮಹಾಬಲ ರೈ ಹೊಸಮನೆ, ರಾಮಚಂದ್ರ ಆಚಾರ್ಯ, ಜಯರಾಮ್ ಶೆಟ್ಟಿ, ರಾಮಯ್ಯ ಆಚಾರ್ಯ, ಲಿಂಗಪ್ಪ ರಾಣ್ಯ, ಸುರೇಶ ಕೊಕ್ಕೆಪುಣಿ, ನಾರಾಯಣ ಟೈಲರ್, ಪರಮೇಶ್ವರ್, ಬಾಬು ನಾಯ್ಕ್, ಮುತ್ತಪ್ಪ ಮೂಲ್ಯ, ಶ್ರೀಮತಿ ಸೀತಾ ಹರೀಶ್, ಶ್ರೀಮತಿ ರೇವತಿ, ಶ್ರೀಮತಿ ಮಹಾಲಕ್ಷ್ಮಿ, ಶ್ರೀಮತಿ ನಳಿನಿ ಬಾಬು ಶೆಟ್ಟಿಯವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸದರು.
ಬಿಜೆಪಿ ಹಿರಿಯ ನಾಯಕ ಮಾಜಿ ಎಪಿಎಂಸಿ ಅಧ್ಯಕ್ಷ ನೇಮಿರಾಜ್ ರೈ, ಜಿಲ್ಲಾ ನಾಯಕ ಮಾಧವ್ ಮಾವೆ, ಮಾಣಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ, ಸಹಕಾರ ಪ್ರಕೊಷ್ಠ ಸಂಚಾಲಕ ಜಯರಾಮ್ ರೈ , ಸುಧಾಕರ್ ರೈ (kmf ), ಮಾಜಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶೋಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭ್ಯಾಸ ವರ್ಗದ ಪ್ರಥಮ ಅವಧಿಯ “ನಮ್ಮ ವೈಚಾರಿಕತೆ, ಪಂಚ ಪರಿವರ್ತನೆ” ಈ ವಿಷಯದ ಬಗ್ಗೆ ವಿಕಾಸ್ ಪುತ್ತೂರು ಮಾಹಿತಿ ನೀಡಿದರು.ವೇದಿಕೆಯಲ್ಲಿ ಸಂಪತ್ ಉಪಸ್ಥಿತರಿದ್ದರು.
ದ್ವಿತೀಯ ಅವಧಿಯ “ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ” ವಿಷಯದ ಬಗ್ಗೆ ದಿನೇಶ್ ಅಮ್ಟೂರು ಮಾತಾಡಿದರು. ವೇದಿಕೆಯಲ್ಲಿ ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.
ಅಭ್ಯಾಸ ವರ್ಗ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಧ್ಯಾಹ್ನ ನಡೆಯಿತು. ಶಕ್ತಿಕೇಂದ್ರ ಪ್ರಮುಖ ಉಮೇಶ್ ಕುಲಾಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲಖಿತ ಆರ್ ಶೆಟ್ಟಿ ಪ್ರಧಾನ ಭಾಷಣ ಮಾಡಿದರು. ವೇದಿಕೆಯಲ್ಲಿ ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ಮಹಿಳಾ ಮೋರ್ಚಾ ಜಿಲ್ಲಾ ಸದಸ್ಯೆ ಶ್ರೀಮತಿ ಭವಾನಿ ಶೆಟ್ಟಿ, ಮಂಡಲ ಕಾರ್ಯಕಾರಿ ಸದಸ್ಯ ದೀಕ್ಷಿತ್, ಅಭ್ಯಾಸ ವರ್ಗ ಸಂಚಾಲಕ ಚೆನ್ನಪ್ಪ ಪೂಜಾರಿ, ಸಹ ಸಂಚಾಲಕ ಮಹೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉಸ್ತುವಾರಿ ಜಯರಾಮ್ ಶೆಟ್ಟಿ ಸ್ವಾಗತಿಸಿ, ಉಮೇಶ್ ಕುಲಾಲ್ ವಂದಿಸಿದರು.








