Saturday, May 18, 2024
spot_imgspot_img
spot_imgspot_img

ದುಬೈನಿಂದ ಮಂಗಳೂರಿಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ, ಬಂಧಿಸಲು SIT ತಯಾರಿ

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೋಲಾಹಲ ಸೃಷ್ಟಿಸಿದ ಘಟನೆಯಲ್ಲಿ ಹೆಚ್‌ಡಿ ರೇವಣ್ಣ ಬಂಧನವಾಗಿದೆ. ಇದರ ಬೆನ್ನಲ್ಲೇ ದುಬೈನಲ್ಲಿರುವ ಪ್ರಜ್ವಲ್ ರೇವಣ್ಣ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ ಇದೆ. ಇತ್ತ ಎಸ್‌ಐಟಿ ತಂಡ ವಿಮಾನ ನಿಲ್ದಾಣದಲ್ಲೇ ಬಂಧಿಸಲು ತಯಾರಿ ನಡೆಸಿದೆ.

ಹೆಚ್‌ಡಿ ರೇವಣ್ಣ ಬಂಧನವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕುಸಿದು ಹೋಗಿದ್ದಾರೆ. ತನ್ನ ಸಂಪೂರ್ಣ ಶಕ್ತಿಯಾಗಿದ್ದ ರೇವಣ್ಣ ಬಂಧನದ ಬೆನ್ನಲ್ಲೇ ಎಸ್‌ಐಟಿ ಶರಣಾಗಲು ಪ್ರಜ್ವಲ್ ರೇವಣ್ಣ ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದಕ್ಕಾಗಿ ದುಬೈನಿಂದ ತಕ್ಷಣಕ್ಕೆ ಲಭ್ಯವಿದ್ದ ಮಂಗಳೂರು ವಿಮಾನದಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ

ರೇವಣ್ಣ ಬಂಧನ ಹೆಚ್‌ಡಿ ಕುಟುಂಬವನ್ನೇ ಅಲುಗಾಡಿಸಿದೆ. ಇತ್ತ ವಿದೇಶಕ್ಕೆ ಹಾರಿದ್ದ ಪುತ್ರ ಪ್ರಜ್ವಲ್ ರೇವಣ್ಣ ಇದೀಗ ದುಬೈನಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲು ಸಜ್ಜಾಗಿದ್ದಾರೆ. ಇತ್ತ ಎಸ್‌ಐಟಿ ಅಧಿಕಾರಿಗಳು ಮಂಗಳೂರ ವಿಮಾನ ನಿಲ್ದಾಣದಲ್ಲೇ ಪ್ರಜ್ವಲ್ ರೇವಣ್ಣ ಬಂಧಿಸಲು ಸಿದ್ಧತೆ ನಡೆಸಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ದೂರುಗಳು ದಾಖಲಾಗಿದೆ. ಈ ಪೈಕಿ ಹೊಳೆನರಸೀಪುರದಲ್ಲಿ ರೇವಣ್ಣ ಕುಟುಂಬದ ಮನೆಗೆಲಸದಾಕೆ ನೀಡಿದ್ದ ದೂರಿನಲ್ಲಿ ಹೆಚ್‌ಡಿ ರೇವಣ್ಣ ಎ1 ಆರೋಪಿಯಾಗಿದ್ದು, ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ. ಇದೀಗ ರೇವಣ್ಣ ಬಂಧನಕ್ಕೆ ಕಾರಣವಾಗಿರುವುದು ಅಪಹರಣ ಪ್ರಕರಣ.

- Advertisement -

Related news

error: Content is protected !!