Monday, May 6, 2024
spot_imgspot_img
spot_imgspot_img

ಟೋಕಿಯೊ ಒಲಿಂಪಿಕ್ಸ್‌: ಭಾರತದ ಏಕೈಕ ಜಿಮ್ನಾಸ್ಟ್ ಪಟು ಪ್ರಣತಿ ನಾಯಕ್ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆ

- Advertisement -G L Acharya panikkar
- Advertisement -

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಜಿಮ್ನಾಸ್ಟ್ ಪಟು ಪ್ರಣತಿ ನಾಯಕ್, ಭಾನುವಾರ ಇಲ್ಲಿ ನಡೆದ ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದ್ದಾರೆ.

ಇದರೊಂದಿಗೆ ಭಾರತದ ಪದಕದ ಆಸೆ ಕಮರಿದೆ. 26 ವರ್ಷದ ಪಶ್ಚಿಮ ಬಂಗಾಳ ಮೂಲದ ಪ್ರಣತಿ, ನಾಲ್ಕು ವಿಭಾಗಗಳಲ್ಲಿ (ಫ್ಲೋರ್ ಎಕ್ಸೈಜ್, ವಾಲ್ಟ್, ಅನ್‌ಇವನ್ ಬಾರ್ಸ್, ಬ್ಯಾಲೆನ್ಸ್ ಬೀಮ್) ಒಟ್ಟು 42.565 ಸ್ಕೋರ್ ಕಲೆ ಹಾಕಿದರು. ಸಬ್‌ಡಿವಿಷನ್ 2ರ ಅಂತ್ಯಕ್ಕೆ ಒಟ್ಟಾರೆಯಾಗಿ 29ನೇ ರ‍್ಯಾಂಕ್ ಗಿಟ್ಟಿಸಿಕೊಂಡರು.

ಒಟ್ಟು ಐದು ಸಬ್‌ಡಿವಿಷನ್‌ಗಳಿದ್ದು, ಅದರಲ್ಲಿ ಅಗ್ರ 24 ಜಿಮ್ನಾಸ್ಟ್‌ಗಳು (ಎಲ್ಲ 4ರಲ್ಲೂ ಉತ್ತಮ ಸ್ಕೋರ್ ಗಳಿಸಿದವರು) ಜುಲೈ 29ರಂದು ನಡೆಯಲಿರುವ ಆಲ್-ರೌಂಡ್ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಪ್ರತಿ ವಿಭಾಗದಲ್ಲಿ ಅಗ್ರ ಎಂಟು ಸ್ಥಾನಗಳನ್ನು ಪಡೆಯಲಿರುವ ಜಿಮ್ನಾಸ್ಟ್‌ಗಳು ಆಗಸ್ಟ್ 1ರಿಂದ 3ರ ವರೆಗೆ ನಡೆಯಲಿರುವ ಆಯಾ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದ್ದಾರೆ. ಹಾಗಿದ್ದರೂ ಪ್ರಣತಿ ನಾಯಕ್ ಎಲ್ಲ ನಾಲ್ಕು ವಿಭಾಗದಲ್ಲೂ ನಿರಾಸೆ ಮೂಡಿಸಿದರು.

- Advertisement -

Related news

error: Content is protected !!