Sunday, May 19, 2024
spot_imgspot_img
spot_imgspot_img

ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರು ಸಾವು

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg
This image has an empty alt attribute; its file name is VC_PUC_-1-819x1024.jpg

ಸಮುದ್ರದಲ್ಲಿ ಈಜಾಡಲು ಹೋಗಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮುದ್ರದಲ್ಲಿ ನಡೆದಿದೆ.

ಮೌಲ್ವಿ ಇಸ್ಮಾಯಿಲ್ ಬರ್ಮಾವರ್ (22), ಶಿವಮೊಗ್ಗ ಶಿರಾಳಕೊಪ್ಪದ ಇನ್ನೋರ್ವ ಯುವಕ ಮೃತರು.

ಭಾನುವಾರ ಸಂಜೆ ಮುರುಡೇಶ್ವರ ಸಮುದ್ರದಲ್ಲಿ ಈಜಾಡಲು ನಾಲ್ವರು ಯುವಕರು ತೆರಳಿದ್ದು, ಸಮುದ್ರಕ್ಕೆ ಇಳಿದ ಬಳಿಕ ಅಲೆಗಳ ರಭಸಕ್ಕೆ ನಾಲ್ವರು ಸಮುದ್ರದಲ್ಲಿ ಸಿಕ್ಕಿಹಾಕಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ಸ್ ದೋಣಿಯ ಸಹಾಯದಿಂದ ಇಬ್ಬರನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು. ಆದರೆ ಇನ್ನಿಬ್ಬರು ಅಲೆ ಹೊಡೆತಕ್ಕೆ ಸಮುದ್ರದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಯುವಕರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

- Advertisement -

Related news

error: Content is protected !!