Sunday, June 7, 2026
spot_imgspot_img
spot_imgspot_img

ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಿದ ರಾಷ್ಟ್ರಪತಿ ಮುರ್ಮು

- Advertisement -
- Advertisement -

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಾರೆ.

ಕಾನೂನು ಸಚಿವಾಲಯದ ಅಧಿಸೂಚನೆಯ ಪ್ರಕಾರ, ರಾಷ್ಟ್ರಪತಿಗಳು ಗುರುವಾರ ಒಪ್ಪಿಗೆ ನೀಡಿದ್ದು. ಈಗ ಇದನ್ನು ಅಧಿಕೃತವಾಗಿ ಸಂವಿಧಾನ (106 ನೇ ತಿದ್ದುಪಡಿ) ಕಾಯಿದೆ ಎಂದು ಕರೆಯಲಾಗುತ್ತದೆ.

ಇನ್ನು ಕೇಂದ್ರ ಸರಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸುವ ದಿನಾಂಕದಂದು ಇದು ಜಾರಿಗೆ ಬರುತ್ತದೆ.

- Advertisement -

Related news

error: Content is protected !!