- Advertisement -
- Advertisement -



ನವದೆಹಲಿ: ವಂದೇ ಮಾತರಂ ಗೀತೆಯನ್ನು ಅವಮಾನಿಸಿದರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.
ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ದಂತೆ ಸಮಾನವಾದ ಕಾನೂನು ಸ್ಥಾನಮಾನ ನೀಡುವ ಹಾಗೂ ಗೀತೆಗೆ ಅವಮಾನ ಅಥವಾ ಅಡ್ಡಿಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ (ತಿದ್ದುಪಡಿ) ಮಸೂದೆ, 2026’ ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕಾರಗೊಂಡಿತ್ತು.
ಲೋಕಸಭೆಯು ಜುಲೈ 30 ರಂದು ಮಸೂದೆಯನ್ನು ಅಂಗೀಕರಿಸಿತ್ತು. ರಾಜ್ಯಸಭೆಯು ಒಂದು ದಿನ ಮುಂಚಿತವಾಗಿ ಅದನ್ನು ಅಂಗೀಕರಿಸಿತ್ತು. ಮಸೂದೆ ಈಗ ರಾಷ್ಟ್ರಪತಿಗಳ ಅಂಕಿತ ಪಡೆದು ಕಾನೂನಾಗಿರುವುದಾಗಿ ತಿಳಿದುಬಂದಿದೆ.
- Advertisement -







