Tuesday, July 21, 2026
spot_imgspot_img
spot_imgspot_img

ಬೆಳಗಾವಿ :ನೀರಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರು ಪಾಲು

- Advertisement -
- Advertisement -

ಬೆಳಗಾವಿ : ನೀರಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸಾವನ್ನಪ್ಪಿದ ತಾಯಿ, ಮಗನನ್ನು ಲಕ್ಷ್ಮಿ ಕುಠೋಳಿ (27) ಹಾಗೂ ಸುಪ್ರೀತ್ ಕುಠೋಳಿ(10) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಕೇಶ್ವರದ ಹಿರಣ್ಯಕೇಶಿ ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದಾಗ ಈ ದುರಂತ ನಡೆದಿದ್ದು, ಮಗ ಸುಪ್ರೀತ್ ನದಿಯಲ್ಲಿ ಇಳಿದಾಗ ಮುಳುಗಲಾರಂಭಿಸಿದ್ದು, ಮಗನನ್ನು ರಕ್ಷಣೆ ಮಾಡಲು ಹೋಗಿ ತಾಯಿಯೂ ನೀರುಪಾಲಾಗಿದ್ದಾರೆ.

ಮಂಗಳವಾರ ರಾತ್ರಿಯೇ ತಾಯಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗಡೆ ತೆಗೆದಿದ್ದು, ಸುಪ್ರಿತ್‌ಗಾಗಿ ಬೋಟ್‌ನಲ್ಲಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!