- Advertisement -
- Advertisement -


ನವದೆಹಲಿ: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅಗಸ್ಟ್ 26 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನ ದೇಶವನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಜಗತ್ತಿನ ಎಲ್ಲಾ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.
ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ್ 26 ರಂದು ಬೆಳಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಇನ್ನು ಪ್ರಧಾನಿ ಮೋದಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಆಫ್ಘಾನ್ ಪರಿಸ್ಥಿತಿ ಕುರಿತು ಮಾಹಿತಿ ಕೇಳಿದ್ದಾರೆ.
ಇನ್ನು ಅಫ್ಘಾನ್ನಲ್ಲಿ ಸಿಲುಕಿರುವ ಭಾರತೀಯರನ್ನ ಕರೆದುಕೊಂಡು ಬರುವ ಪ್ರಕ್ರಿಯೆಗಳು ಜೋರಾಗಿ ನಡೆಯುತ್ತಿದೆ. ಮೋದಿ ನೇತೃತ್ವದ ಸಭೆಯಲ್ಲಿ ಭಾರತೀಯರನ್ನ ಕರೆದುಕೊಂಡು ಬರುವ ಬಗ್ಗೆಯೂ ಚರ್ಚೆ ನಡೆಯಲಿದೆ. ಇದುವರೆಗೆ ಅಫ್ಘಾನ್ನಿಂದ ಇದುವರೆಗೆ 730 ಮಂದಿಯನ್ನ ಭಾರತಕ್ಕೆ ಕರೆದುಕೊಂಡು ಬರಲಾಗಿದೆ. ಅವರಲ್ಲಿ ಅಫ್ಘಾನ್ ಸಿಖ್ರೂ ಕೂಡ ಒಳಗೊಂಡಿದ್ದಾರೆ.




- Advertisement -








