ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಇಲ್ಲಿಯತನಕ ಅವರು ಲೋದಿ ಎಸ್ಟೇಟ್ ಬಂಗಲೆಯಲ್ಲಿ ವಾಸವಿದ್ದರು. ಇನ್ನು ಮುಂದೆ ಮಧ್ಯ ದೆಹಲಿಗೆ ತೆರಳಲಿದ್ದಾರೆ. ಆದರೆ ಅಲ್ಲಿ ನೂತನ ನಿವಾಸದ ನವೀಕರಣ ಕಾರ್ಯ ನಡೆಯುತ್ತಿದೆ. ಅಲ್ಲಿಯವೆರೆಗೆ ಗುರುಗ್ರಾಮ್ ನ ಪೆಂಟ್ ಹೌಸ್ ನಲ್ಲಿ ಕೆಲ ದಿನಗಳ ಕಾಲ ಇರಲಿದ್ದಾರೆ ಎಂದು ತಿಳಿದುಬಂದಿದೆ.
ನಗರಾಭಿವೃದ್ಧಿ ಸಚಿವಾಲಯವು ಜುಲೈ 1ರಂದು ಪ್ರಿಯಾಂಕಾ ಗಾಂಧಿಗೆ ನೋಟಿಸ್ ನೀಡಿ, ಆಗಸ್ಟ್ 1ರ ಮೊದಲು ಲೋದಿ ಎಸ್ಟೇಟ್ ಬಂಗಲೆ ಖಾಲಿ ಮಾಡುವಂತೆ ಕೋರಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ಅವರಿಗೆ ನೀಡಿದ್ದ ವಿಶೇಷ ಭದ್ರತೆಯನ್ನು ವಾಪಸ್ ಪಡೆದುಕೊಳ್ಳಾಗಿತ್ತು. ಹೀಗಾಗಿ ಸರ್ಕಾರಿ ಬಂಗಲೆ ಖಾಲಿ ಮಾಡುವುಂತೆ ಸೂಚಿಸಲಾಗಿತ್ತು. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ನಂತರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಎಸ್ ಪಿ ಜಿ ಭದ್ರತೆ ಒದಗಿಸಲಾಗಿತ್ತು. ಸದ್ಯ ಅವರಿಗೆ ಸಿಆರ್ ಪಿಎಫ್ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.