Monday, May 6, 2024
spot_imgspot_img
spot_imgspot_img

ಪ್ರೊ ಕಬಡ್ಡಿ ಲೀಗ್‌ ಸೀಸನ್ 10ರ ಕಿರೀಟ ಪುಣೇರಿ ಪಲ್ಟನ್​ಗೆ

- Advertisement -G L Acharya panikkar
- Advertisement -

ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ 10 ನೇ ಸೀಸನ್‌ನ ಅಂತಿಮ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್‌ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಪುಣೇರಿ ಪಲ್ಟನ್ 28-25 ಅಂತರದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ಪರ ಅದ್ಭುತ ಪ್ರದರ್ಶನ ನೀಡಿದ ಪಂಕಜ್ ಮೋಹಿತೆ ಮತ್ತು ಮೋಹಿತ್ ಗೋಯೆಟ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಈ ಲೀಗ್​ನಲ್ಲಿ ಪುಣೇರಿ ಪಲ್ಟನ್ ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತು. ಅದರಂತೆ ಲೀಗ್ ಹಂತದಲ್ಲಿ ಒಟ್ಟು 96 ಅಂಕಗಳನ್ನು ಗಳಿಸಿದ್ದ ಪಲ್ಟನ್ ಪಡೆ ಅಂತಿಮ ಪಂದ್ಯದ ಮೊದಲಾರ್ಧದಲ್ಲಿಯೂ ಅದೇ ಆಟವನ್ನು ಮುಂದುವರೆಸಿತು. ಅದರಂತೆ ಮೊದಲಾರ್ಧವನ್ನು 13-10 ಮುನ್ನಡೆಯೊಂದಿಗೆ ಕೊನೆಗೊಳಿಸಿತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪುಣೇರಿ ಪರ ಪಂಕಜ್ ಮೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ನಾಲ್ಕು ಪ್ರಮುಖ ಅಂಕಗಳನ್ನು ತಂದುಕೊಟ್ಟರು.

ಮೊದಲಾರ್ಧದಲ್ಲಿ 3 ಅಂಕಗಳ ಹಿನ್ನಡೆ ಅನುಭವಿಸಿದ್ದ ಹರಿಯಾಣ ತಂಡ ದ್ವಿತೀಯಾರ್ಧದಲ್ಲಿ ಪಂದ್ಯದಲ್ಲಿ ಕಂಬ್ಯಾಕ್ ಮಾಡಲು ಪ್ರಯತ್ನಿಸಿತು. ಆದರೆ ಇದಕ್ಕೆ ಪುಣೇರಿ ತಂಡ ಅವಕಾಶ ನೀಡಲಿಲ್ಲ. ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ತಲಾ 15 ಅಂಕ ಸಂಪಾದಿಸಿ ಪಂದ್ಯವನ್ನು ರೋಚಕಗೊಳಿಸಿದರು. ಆದರೆ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ ಸಾಧಿಸಿದ ಮುನ್ನಡೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ ತಲಾ 43 ರೇಡ್‌ಗಳು ನಡೆದವು. ಇದರಲ್ಲಿ ಹರಿಯಾಣ ಸ್ಟೀಲರ್ಸ್ 15 ಯಶಸ್ವಿ ರೈಡ್‌ಗಳನ್ನು ಮಾಡಿದ್ದರೆ, ಪುಣೇರಿ ಪಲ್ಟನ್ 12 ಯಶಸ್ವಿ ರೈಡ್‌ಗಳನ್ನು ಮಾಡಿತು. ಅಂತಿಮವಾಗಿ ಲೀಗ್ ಉದ್ದಕ್ಕೂ ಅತ್ಯುತ್ತಮವಾಗಿ ಡಿಫೆಂಡರ್ ಪಾತ್ರನಿರ್ವಹಿಸಿದ ಇರಾನ್ ಆಟಗಾರ ಮೊಹಮ್ಮದ್ರೇಜಾ ಅವರಿಗೆ ಈ ಸೀಸನ್ ಅತ್ಯುತ್ತಮ ಡಿಫೆಂಡರ್ ಆಟಗಾರ ಪ್ರಶಸ್ತಿಯೂ ಲಭಿಸಿತು.

- Advertisement -

Related news

error: Content is protected !!