- Advertisement -
- Advertisement -





ಜಮೀಯ್ಯತುಲ್ ಫಲಾಹ್ ಬಂಟ್ವಾಳ ಹಾಗೂ ಡ್ರೀಮ್ ಎಸೋಸಿಯೇಟ್ಸ್ ಮಂಗಳೂರು ಸಹಯೋಗದೊಂದಿಗೆ ವಿಟ್ಲ ಸಮೀಪದ ಬೊಳಂತಿಮೊಗರು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ (06/12) ಶೈಕ್ಷಣಿಕ ಮಾಹಿತಿ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ ವಿತರಣೆ ನಡೆಯಿತು.


ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿ ಬಿ.ಮೂಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಶೈಕ್ಷಣಿಕ ಮಾಹಿತಿ ನೀಡಿದರು.ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಸದಸ್ಯರಾದ ಮಹಮ್ಮದ್ ಟಿ.ಕೆ., ಉಬೈದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತು ಸದಸ್ಯರಾದ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಯಾಸೀನ್ ಬೇಗ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶೌಕತ್ ಶೇಖ್, ಬೊಳಂತಿಮೊಗರು ಮಸೀದಿ ಅಧ್ಯಕ್ಷರಾದ ಜಾಫರ್ ಖಾನ್ ಮೊದಲಾವರು ಉಪಸ್ಥಿತರಿದ್ದರು. ಮುಖ್ಯೋಪಾದ್ಯಾಯರಾದ ಉದಯ ಸ್ವಾಗತಿಸಿ ವಂದಿಸಿದರು.
- Advertisement -