Saturday, April 20, 2024
spot_imgspot_img
spot_imgspot_img

ವಿಟ್ಲ: ದುಡಿಯೋ ವರ್ಗದವರಿಗೆ ಊಟ, ಆಹಾರದ ಚಿಂತೆಯೇ..? ಶ್ರೀ ಸಾಯಿ ಟೌನ್ ಕಿಚನ್ ಅವರಿಂದ ಫುಡ್ ಡೆಲಿವರಿ

- Advertisement -G L Acharya panikkar
- Advertisement -

ವಿಟ್ಲ: ಕೊರೊನಾ.. ಲಾಕ್‌ಡೌನ್ ಸಂಕಷ್ಟ. ಒಂದು ಕಡೆ ಕೆಲಸ. ಇದರ ನಡುವೆ ಹೊಟ್ಟೆಪಾಡಿನ ಬಿಸಿ. ಏನೇ ಆದರೂ ಹೊಟ್ಟೆಗೆ ಹಿಟ್ಟು ಬಿದ್ದರೆ ಎಲ್ಲವೂ ಸಾಧ್ಯ. ಆದರೆ ಸರ್ಕಾರ ಮತ್ತೆ 14 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದು ಕೆಲವೊಂದು ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ. ಕೆಲವೊಂದು ಸಂಸ್ಥೆಗಳು ಲಾಕ್‌ಡೌನ್ ಕಾಲದಲ್ಲೂ ಕಾರ್ಯ ನಿರ್ವಹಿಸುತ್ತಿದೆ.

ಹೊಟ್ಟೆ ಪಾಡಿಗಾಗಿ ದುಡಿಯೋ ಕಾರ್ಮಿಕ ವರ್ಗಕ್ಕೆ ಸರ್ಕಾರ ಅನುಮತಿ ನೀಡಿರೋದು ಒಂದು ಕಡೆಯಾದ್ರೆ ಮದ್ಯಾಹ್ನದ ಊಟಕ್ಕೆ ಯಾವ ರೀತಿಯ ವ್ಯವಸ್ಥೆ ಎಂಬ ಪ್ರಶ್ನೆ ಮೂಡಿದೆ. ಕೆಲವೊಂದು ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇದೆ. ಆದರೆ ರೋಡ್‌ಗೆ ಇಳಿದರೆ ಪೊಲೀಸರ ಭಯವೂ ಕಾಡಿದೆ.

ಆದರೆ ಈ ಟೆನ್ಷನ್ ಬಿಟ್ಟುಬಿಡಿ. ವಿಟ್ಲದ ಶ್ರೀ ಸಾಯಿ ಟೌನ್ ಕಿಚನ್ ದುಡಿಯೋ ವರ್ಗ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸೇವೆ ಸದಾ ಸಿದ್ಧವಾಗಿದೆ. ಕೋವಿಡ್ ಗೈಡ್‌ಲೈನ್ಸ್ ಅನುಸರಿಸಿಕೊಂಡು ಪಾರ್ಸೆಲ್ ಹಾಗೂ ಡೆಲಿವರಿ ಸೇವೆ ನೀಡಲಿದೆ. ಸಸ್ಯಹಾರಿ, ಮಾಂಸಹಾರಿ ಖಾದ್ಯಗಳನ್ನು ತಲುಪಿಸಲಿದೆ. ಈ ಮೂಲಕ ಹಸಿದ ಹೊಟ್ಟೆಯನ್ನು ತಂಪು ಮಾಡಲಿದೆ. ವಿಟ್ಲದ ಆಸುಪಾಸಿನಲ್ಲಿ ಹೋಮ್ ಡೆಲಿವರಿ ಸೇವೆ ಲಭ್ಯವಿದ್ದು ಮುಂಚಿತವಾಗಿ ಆಹಾರ ಬೇಕಾದಲ್ಲಿ ಈ ನಂಬರ್ ಸಂಪರ್ಕಿಸಿ. ದಿವಾಕರ ಶೆಟ್ಟಿ ಅಬೀರಿ, 94802 14761, 99003 74651.

- Advertisement -

Related news

error: Content is protected !!