



ಸಪರಿವಾರ ಶ್ರೀ ಧೂಮಾವತೀ ದೈವದ ಪುನಃ ಪ್ರತಿಷ್ಠಾ ಕಲಶೋತ್ಸವ ಹಾಗೂ ಶ್ರೀ ಧೂಮಾವತೀ ದೈವ ಮತ್ತು ಗುಳಿಗ ದೈವಗಳ ನೇಮೋತ್ಸವ ಫ್ರೆ 20 ಮತ್ತು 21 ರಂದು ಕಾನ, ಮೂವಜೆ ಯಲ್ಲಿ ನಡೆಯಲಿದೆ.
ಫ್ರೆ 20 ರಂದು ಬೆಳಗ್ಗೆ ಘಂಟೆ 8.00ಕ್ಕೆ ತಂತ್ರಿಗಳು ಮತ್ತು ಪುರೋಹಿತರ ಆಗಮನ,ಬೆಳಗ್ಗೆ ಘಂಟೆ 8.30ಕ್ಕೆ,ವೈದಿಕ ಕಾರ್ಯಕ್ರಮಗಳು ಸ್ಥಳ ಶುದ್ಧಿ, ಖನನಾದಿ ಸಪ್ತಶುದ್ಧಿ, ಪ್ರಾರ್ಥನೆ, ಪುಣ್ಯಾಶನಾಚನ, ಆಚಾರ್ಯಾದಿ ಋಗರಣ, ಮಹಾಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮಗಳು, ಉತ್ಸವ ಭಂಗ ದೋಷ ಪ್ರಾಯಶ್ಚಿತ್ತ ಹೋಮ, ಕಲಶ, ಬಾಲಾಲಯದಲ್ಲಿ ಪೂಜೆ ಮಧ್ಯಾಹ್ನ ಘಂಟೆ 1.00ಕ್ಕೆ ಅನ್ನ ಸಂತರ್ಪಣೆ ,ಸಂಜೆಸಾಯಂಕಾಲ ಘಂಟೆ 6.00 ಕ್ಕೆ : ಭಂಡಾರ ಗೃಹದಲ್ಲಿ ವಾಸ್ತುಪೂಜೆ, ವಾಸ್ತುರಕ್ಷೆಘ್ನ ಹೋಮ ವಾಸ್ತುಬಲಿ, ಉತ್ಸವ ಸ್ಥಾನದಲ್ಲಿ ವಾಸ್ತುಪೂಜೆ,ವಾಸ್ತು ರಕ್ಷೆಘ್ನ ಹೋಮ,ವಾಸ್ತುಬಲಿ, ಬಿಂಬಶುದ್ಧಿ, ಅಧಿವಾಸ ಕ್ರಿಯೆಗಳು, ಅಧಿವಾಸ ಹೋಮಗಳು, ಭಂಡಾರ ಗೃಹ ಮತ್ತು ಉತ್ಸವ ಸ್ಥಾನಗಳಲ್ಲಿ ಪುನಃ ಪ್ರತಿಷ್ಠಾ ಕಲಶ ಪೂಜೆ, ಕಲಾವಾಹನೆ, ಕಲಶ ಪೂಜೆ,ಸಂಜೆ 4.00 ರ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ಹಾಗೂ ಭಗವದ್ಗೀತಾ ಪಾರಾಯಣ. ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ, ರಾತ್ರಿ ಘಂಟೆ 9.00ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
ಫ್ರೆ 21 ರಂದು ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪ್ರದಾನ ಹೋಮಗಳುಘಂಟೆ 8.28ರ ಮೀನಲಗ್ನ ಸುಮುಹೂರ್ತದಲ್ಲಿ ಭಂಡಾರ ಗೃಹದಲ್ಲಿ ಶ್ರೀ ಧೂಮಾವತೀ ದೈವದ ಪುನಃ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆಗಳು, ಮಂಗಳಾರತಿ, 12.01ರ ವೃಷಭ ಲಗ್ನ ಸುಮುಹೂರ್ತದಲ್ಲಿ ಉತ್ಸವ ಸ್ಥಾನದಲ್ಲಿ ಶ್ರೀ ಧೂಮಾವತಿ ದೈವದಪೀಠ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ಪೂಜಾ ತಂಬಿಲ, ನಿತ್ಯ ನೈಮಿತ್ತಿಕ ನಿರ್ಣಯ, ತಂಬಿಲ, ಮಂಗಳಾರತಿ, ಪ್ರಸಾದ ವಿತರಣೆ, ಮಂತ್ರಾಕ್ಷತೆ,ಮಧ್ಯಾಹ್ನ ಘಂಟೆ 1.00ಕ್ಕೆಅನ್ನ ಸಂತರ್ಪಣೆ, ಸಂಜೆ 4.00 ರಿಂದ 6.00 ರ ವರೆಗೆವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ.ಸಂಜೆ 6:30 ಕ್ಕೆ ದುರ್ಗಾಪೂಜೆ,ಭಂಡಾರ ಗೃಹದಿಂದ ಉತ್ಸವ ಸ್ಥಾನಕ್ಕೆ ಭಂಡಾರ ಇಳಿಯುವುದು,ಸಂಜೆ ಘಂಟೆ 7.30 ಕ್ಕೆಉತ್ಸವ ಸ್ಥಾನದಲ್ಲಿ ಭಂಡಾರ ಏರುವುದು. ಸುವಾಸಿನಿ, ಕುಮಾರಿಕಾ ಪೂಜೆಗಳು ಘಂಟೆ 8:00 ಕ್ಕೆ ದುರ್ಗಾಪೂಜೆ ಮಹಾ ಮಂಗಳಾರತಿ ಘಂಟೆ 8.15 ಕ್ಕೆ ಸಭಾ ಕಾರ್ಯಕ್ರಮ ನಂತರ ಉತ್ಸವಕ್ಕೆ ಎಣ್ಣೆ ಬೂಳ್ಯ ಕೊಡುವುದು. ಅನಂತರ ಅನ್ನ ಸಂತರ್ಪಣೆ ನೇಮೋತ್ಸವ ಪ್ರಾರಂಭವಾಗಲಿದೆ.