

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಶತಶೃಂಗ ಸ್ಮರಣ ಸಂಚಿಕೆ ಬಿಡುಗಡೆ ಮಾ.27ರ ಗುರುವಾರ ಸಂಜೆ ಇಡ್ಕಿದು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜರಗಿತು.ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶತಮಾನೋತ್ಸವದ ಯಶಸ್ಸಿಗೆ ಮತ್ತು ಸ್ಮರಣ ಸಂಚಿಕೆಯನ್ನು ಉತ್ತಮವಾಗಿ ಹೊರ ತರಲು ಸಹಕರಿಸಿದ ಹಿಂದಿನ ಮತ್ತು ಆಡಳಿತ ಮಂಡಳಿಗೆ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಿತ ಸಿಬ್ಬಂದಿ ವರ್ಗಕ್ಕೆ ಸಂಪಾದಕೀಯ ಮಂಡಳಿಗೆ,ಪುಟ ವಿನ್ಯಾಸಕಾರರಿಗೆ, ಡಿಟಿಪಿಯವರಿಗೆ ಮುದ್ರಕರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು. ಸಂಪಾದಕೀಯ ಮಂಡಳಿ ಪರವಾಗಿ ಗಣೇಶ ಪ್ರಸಾದ ಪಾಂಡೇಲು ಮತ್ತು ಗೀತಾ ಕೋಂಕೋಡಿ ಅನಿಸಿಕೆ ವ್ಯಕ್ತಪಡಿಸಿದರು. ಉಪಾಧ್ಯಕ್ಷ ನೀರಪಳಿಕೆ ರಾಮ ಭಟ್, ನಿರ್ದೇಶಕರಾದ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ನವೀನ್ ಕೆ. ಪಿ. ಪಾಂಡೇಲು, ಉಮೇಶ್ ವಡ್ಯರ್ಪೆ, ಆನಂದ ಕೆ. ಅಡ್ಯಾಲು,ಸತೀಶ್ ಅಳಿಕೆಮಜಲು, ಲೋಹಿತಾಶ್ವ ಎಂ. ಮುಂಡ್ರಬೈಲು,ಹೃಷಿಕೇಶ್ ಕೆ. ಎನ್. ಮುಕ್ಕುಡ,ವಿದ್ಯಾ ವಿ. ಮುದಳೆಗುಂಡಿ, ಪದ್ಮಾವತಿ ಕೂವೆತ್ತಿಲ, ವೃತ್ತಿಪರ ನಿರ್ದೇಶಕ ಗೋಪಾಲಕೃಷ್ಣ ಭಟ್ ಪಡೀಲು ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರುಉಪಸ್ಥಿತರಿದ್ದರು.ಸಂಪಾದಕ ಮಂಡಳಿಯ ಗೀತಾ ಕೋಂಕೋಡಿ, ವಿಶ್ವನಾಥ ಕುಲಾಲ್ ಮಿತ್ತೂರು ಮತ್ತು ಗಣೇಶ ಪ್ರಸಾದ ಪಾಂಡೇಲು ಅವರನ್ನು ಗೌರವಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ .ಈಶ್ವರ ನಾಯ್ಕ ಸ್ವಾಗತಿಸಿ, ವಂದಿಸಿದರು. ಸ್ಮರಣ ಸಂಚಿಕೆ ಸಂಯೋಜಕ ಈಶ್ವರ ಕುಲಾಲ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕ್ಯಾಪ್ಶನ್ಃ ಸುಧಾಕರ ಶೆಟ್ಟಿ ಬೀಡಿನಮಜಲು ಶತಶೃಂಗ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ಸಂಪಾದಕೀಯ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು