Sunday, May 5, 2024
spot_imgspot_img
spot_imgspot_img

ಮಣಿಪಾಲ: ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ; ಪೊಲೀಸ್‌ ದಾಳಿ- ಇಬ್ಬರು ಪರಾರಿ

- Advertisement -G L Acharya panikkar
- Advertisement -

ಮಣಿಪಾಲ: ಹೆರ್ಗಾ ಗ್ರಾಮದ ಈಶ್ವರ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಮಣಿಪಾಲ ಪೊಲೀಸರು ದಾಳಿ ಮಾಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಠಾಣಾ ಪೊಲೀಸರು ಉಡುಪಿಯ ಹೆರ್ಗಾ ಗ್ರಾಮದ ಈಶ್ವರ ನಗರದ ಅಪಾರ್ಟಮೆಂಟ್ ವೊಂದಕ್ಕೆ ದಾಳಿ ಮಾಡಿದ್ದರು.

ಈ ವೇಳೆ ರೂಮ್ ವೊಂದರಲ್ಲಿ ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ದಾಳಿ ವೇಳೆ ಪಯಾಜ್ ಮತ್ತು ಸಚಿನ್ ಎಂಬ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!