
ಬೋಳಿಯಾರ್ನಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಅಮಾಯಕ ಮುಸ್ಲಿಂರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗ ಎಸ್ ಡಿ ಪಿ ಐ ಯಿಂದ ಪ್ರತಿಭಟನೆ ನಡೆಯಿತು.
ಎಸ್ ಡಿ ಪಿ ಐ ಮುಖಂಡ ರಿಯಾಜ್ ಕಡಂಬುರವರು ಪ್ರತಿಭಟನೆಯಲ್ಲಿ ಮಾತನಾಡಿದರು. ಬೋಳಿಯಾರ್ನಲ್ಲಿ ಘಟನೆ ನಡೆದ ನಂತರ ಪೊಲೀಸ್ ಅಕ್ರಮ ದಾಳಿಗಳು ನಡೆಯಲು ಆರಂಭಿಸಿತು, ಅಂದಿನಿಂದ ಇವತ್ತಿನವರೆಗೂ ಎಸ್ ಡಿ ಪಿ ಐ ಬೋಳಿಯಾರ್ನ ಜನತೆಯೊಂದಿಗಿದೆ. ಪೊಲೀಸ್ ಇಲಾಖೆಗೆ ಮತ್ತು ಸರ್ಕಾರಕ್ಕೆ ಹೇಳುವುದೇನೆಂದರೇ ನೀವು ನಿನ್ನೆಯವರೆಗೆ ಅಲ್ಲಿನ ಮುಸಲ್ಮಾನರ ಮನೆಗೆ ನುಗ್ಗಿ ಯುವಕರನ್ನು ಅರೆಸ್ಟ್ ಮಾಡುವುದನ್ನು ನಿನ್ನೆಗೆ ನಿಲ್ಲಿಸಬೇಕು, ಒಂದು ವೇಳೆ ಮುಂದುವರೆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಒಟ್ಟುಗೂಡಿಸಿ ಸ್ತಬ್ದಗೊಳಿಸುತ್ತೇವೆ.
ಬೋಳಿಯಾರ್ ಘಟನೆ ಬಗ್ಗೆ ಕಮೀಷನರ್ ಪತ್ರಿಕಾಗೋಷ್ಟಿಯನ್ನು ಕರೆದು ಮಾಧ್ಯಮದ ಮುಖಾಂತರ ಈ ಘಟನೆಯ ಹಿಂದೆ ಯಾರು ಇದ್ದರು, ಯಾಕಾಗಿ ನಡೆಯಿತು ಎಂದು ಸ್ಪಷ್ಟನೆ ನೀಡಿದ್ದರು . ಅಷ್ಟು ಸ್ಪಷ್ಟನೆ ನೀಡಿದ್ದ ಕಮೀಷನರ್ ಅದೇ ದಿನ ರಾತ್ರಿ ಮುಸಲ್ಮಾನರ ಮನೆಗೆ ದಾಳಿ ನಡೆಸಲು ನಿಮಗೆ ಒತ್ತಡ ಹಾಕಿದವರ್ಯಾರು ಎಂದು ಮತ್ತೊಮ್ಮೆ ಪತ್ರಿಕಾಗೋಷ್ಟಿಯನ್ನು ಕರೆದು ನೀವು ತಿಳಿಸಬೇಕು ಎಂದರು.
ಬೋಳಿಯಾರ್ ಘಟನೆಯಲ್ಲಿ ಪೊಲೀಸ್ ಇಲಾಖೆ ಎಡವಿದ ಕಾರಣ ಎಸ್ ಡಿ ಪಿ ಐ ನಿನ್ನೆ ಪತ್ರಿಕಾಗೋಷ್ಟಿ ಕರೆದು, ಇವತ್ತು ಈ ಪ್ರತಿಭಟನೆ ನಡೆಸಬೇಕಾಯಿತು ಎಂದರು.
ಮೊನ್ನೆ ಹರೀಶ್ ಪೂಂಜಾರವರು ಹೇಳಿದರು ಮುಸಲ್ಮಾನರ ಮಸೀದಿಗಳಲ್ಲಿ ಆಯುಧ ಶೇಖರಣೆ ಇದೆಯೆಂದರು…ರಾಜ್ಯ ಸರಕಾರ ಬೇಕಾದರೆ ತನಿಖೆಗೆ ಆದೇಶಿಸಲಿ,ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಹರೀಶ್ ಪೂಂಜಾರನ್ನು ಬಂಧಿಸುವ ತಾಕತ್ತು ಕಮೀಷನರ್ಗೆ ಇಲ್ಲ. ಒಂದು ವೇಳೆ ಮಸೀದಿಗಳಲ್ಲಿ ಆಯುಧಗಳಿರುತ್ತಿದ್ದರೆ ಬಾಬರಿ ಮಸಿದಿ ಉರುಳುತ್ತಿರಲಿಲ್ಲ ಹಾಗೂ ಮಳಲಿ ಮಸಿದಿ ಬಳಿ ಶರಣ್ ಪಂಪವೆಲ್ ಬರುತ್ತಿರಲಿಲ್ಲ.ನಾವು ನಮ್ಮ ಮಸೀದಿಯನ್ನು ಶಾಂತಿಯ ಸಂಕೇತವಾಗಿ ಬೆಂಬಳಿಸಿದ್ದೇವೆ ಎಂದರು.